Advertisement

ಉದನೆ-ಕೊಣಾಜೆ ಸೇತುವೆ ಕಾಮಗಾರಿ ಶಂಕುಸ್ಥಾಪನೆ

12:16 PM Dec 06, 2017 | |

ನೆಲ್ಯಾಡಿ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಾಗಿಲ್ಲದಿದ್ದರೂ ಡಾ| ರಘು ಅವರ ಪ್ರಯತ್ನದ ಮೂಲಕ ಕ್ಷೇತ್ರದ ಅತೀ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲಾಗಿದೆ. ಉದನೆ ಮತ್ತು ಆರಂತೋಡುವಿನಲ್ಲಿ ಸೇತುವೆಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಅರಣ್ಯ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ನುಡಿದರು.

Advertisement

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪುತ್ತೂರು ತಾಲೂಕಿನ ಕೊಣಾಜೆ ಗ್ರಾಮದ ಉದನೆ ಎಂಬಲ್ಲಿ ಗುಂಡ್ಯ ನದಿಗೆ ಅಡ್ಡಲಾಗಿ 9.60 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ನೂತನ ಸೇತುವೆ ಕಾಮಗಾರಿ ಮತ್ತು ಜಿ.ಪಂ. ಮತ್ತು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಇಲಾಖೆ ಆಶ್ರಯದಲ್ಲಿ, ನಬಾರ್ಡ್‌ ಯೋಜನೆ ಅಡಿ 80 ಲಕ್ಷ ರೂ. ವೆಚ್ಚದಲ್ಲಿ ಉದನೆ-ಶಿಬಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಅವರು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸಂತೃಪ್ತಿ ಇದೆ
ತಾಲೂಕಿನಲ್ಲಿರುವ ಶ್ರೀಲಂಕಾದಿಂದ ವಲಸೆ ಬಂದ ತಮಿಳರಿಗೆ ಪಡಿತರ ಚೀಟಿ ಮತ್ತು ಜಾತಿ ಸರ್ಟಿಫಿಕೇಟ್‌ ನೀಡುವ ಅತೀ ದೊಡ್ಡ ಬೇಡಿಕೆಗೆ ಈ ಹಿಂದಿನ ಸರಕಾರಗಳು ಸಮ್ಮತಿಸದಿದ್ದರೂ ತನ್ನ ಅವಧಿಯಲ್ಲಿ ಅದನ್ನು ಈಡೇರಿಸಿದ ಸಂತೃಪ್ತಿ ಇದೆ ಎಂದರು. 

ಮುಖ್ಯ ಅತಿಥಿಗಳಾಗಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸರ್ವೋತ್ತಮ ಗೌಡ, ಕಡಬ ಕ್ಷೇತ್ರದ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌, ಕೆ.ಪಿ.ಸಿ.ಸಿ. ಸುಳ್ಯ ವಿಧಾನ ಸಭಾ ಕ್ಷೇತ್ರದ ವೀಕ್ಷಕಿ ಸವಿತಾ ರಮೇಶ್‌, ಕೆಪಿಸಿಸಿ ಸದಸ್ಯ ಡಾ| ರಘು, ಬಿಳಿನೆಲೆ ಕ್ಷೇತ್ರದ ತಾ.ಪಂ. ಸದಸ್ಯೆ ಆಶಾ ಲಕ್ಷ್ಮಣ್‌, ನೆಲ್ಯಾಡಿ ಕ್ಷೇತ್ರದ ತಾ.ಪಂ. ಸದಸ್ಯೆ ಉಷಾ ಅಂಚನ್‌, ಕೆ.ಡಿ.ಪಿ. ಸದಸ್ಯ ಸತೀಶ್‌ ಕೆಡೆಂಜಿ, ಮಂಗಳೂರಿನ ಕಾರ್ಪೊರೇಟರ್‌ ಎ.ಸಿ. ವಿನಯರಾಜ್‌, ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕೆ.ಆರ್‌.ಡಿ.ಸಿ.ಎಲ್‌ ಮುಖ್ಯ ಎಂಜಿನಿಯರ್‌ ನಂಜುಂಡಯ್ಯ, ಕೊಣಾಜೆ ಗ್ರಾ.ಪಂ. ಅಧ್ಯಕ್ಷೆ ಬೇಬಿ, ಕೊಣಾಜೆ ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ, ಶಿರಾಡಿ ಗ್ರಾ.ಪಂ. ಸದಸ್ಯ ಎಂ.ಕೆ. ಪೌಲೋಸ್‌, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಕಡಬ ಜಿ.ಪಂ. ಮಾಜಿ ಸದಸ್ಯೆ ಕುಮಾರಿ ವಾಸುದೇವನ್‌, ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಜಿಲ್ಲಾ ಪ್ರ. ಕಾರ್ಯದರ್ಶಿ ಎ.ಸಿ. ಮಾಥ್ಯು ಶಿಬಾಜೆ, ಬಿಳಿನೆಲೆ ಗ್ರಾ.ಪಂ.ಅಧ್ಯಕ್ಷೆ ಶಾರದಾ, ನೂಜಿಬಾಳ್ತಿಲ ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ, ಎಪಿ.ಎಂಸಿ ನಿರ್ದೇಶಕ ರಾಮಕೃಷ್ಣ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಪಿ.ಪಿ. ವರ್ಗೀಸ್‌ ಸ್ವಾಗತಿಸಿದರು. ಕಡಬ ಬ್ಲಾಕ್‌ ಅಧ್ಯಕ್ಷ ದಿವಾಕರ ಗೌಡ ವಂದಿಸಿದರು. ಉದನೆ- ಶಿಬಾಜೆ ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಕೆ.ಕೆ. ಸೆಬಾಸ್ಟಿಯನ್‌ ನಿರೂಪಿಸಿದರು.

Advertisement

ಮರ್ದಾಳ ಕ್ಷೇತ್ರದ ಬಿಜೆಪಿ ಬೆಂಬಲಿತ ತಾ.ಪಂ. ಸದಸ್ಯೆ ಪಿ.ವೈ. ಕುಸುಮಾ ಅವರು ತಮ್ಮ ಭಾಷಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಾಗೂ ಮುಖ್ಯಮಂತ್ರಿಗಳ ಕಾರ್ಯವನ್ನು ಶ್ಲಾ ಘಿಸಿದರು.

ಕನಸು ನನಸು
ಸಮಾಜ ಕಲ್ಯಾಣ ಇಲಾಖೆ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ, ಹೊಸದಾಗಿ ಅಧಿಕಾರ ವಹಿಸಿಕೊಂಡ ಕಡಬ ಬ್ಲಾಕ್‌ ಅಧ್ಯಕ್ಷ ದಿವಾಕರ ಗೌಡ ಹಾಗೂ ಉದನೆ ಶಿಬಾಜೆ ರಸ್ತೆ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಕೆ. ಸೆಬಾಸ್ಟಿಯನ್‌ ಈ ಭಾಗದ ಹಲವರನ್ನು ಸೇರಿಸಿಕೊಂಡು ತಮ್ಮಲ್ಲಿ ಸೇತುವೆಯ ಬಗ್ಗೆ ಒತ್ತಡ ತಂದ ಹಿನ್ನೆಲೆಯಲ್ಲಿ ಸಚಿವರಾದ ರಮಾನಾಥ ರೈ ಹಾಗೂ ಡಾ| ಎಚ್‌.ಸಿ. ಮಹದೇವಪ್ಪಅವರ ವಿಶೇಷ ಮುತುವರ್ಜಿಯಿಂದ ಈ ಕನಸು ಈಡೇರಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next