Advertisement

ಯುರೇನಿಯಂ ಅಭಿವೃದ್ಧಿ ಗರಿಷ್ಠ: ಇರಾನ್‌ ಸರ್ಕಾರ ಘೋಷಣೆ

01:43 AM Jul 08, 2019 | Team Udayavani |

ಟೆಹ್ರಾನ್‌: ಇರಾನ್‌ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಮೆರಿಕ ಗುಟುರು ಹಾಕಿರುವಂತೆಯೇ, ಭಾನುವಾರ ಆ ದೇಶದ ಸರ್ಕಾರದಿಂದ ಮಹತ್ವದ ಘೋಷಣೆ ಹೊರಬಿದ್ದಿದೆ.

Advertisement

2015ರಲ್ಲಿ ಅಮೆರಿಕ ಮತ್ತು ವಿಶ್ವದ ಇತರ ರಾಷ್ಟ್ರಗಳ ಜತೆಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಮುಂಚೆ ಇದ್ದ ಮಾದರಿಯಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಯುರೇನಿಯಂ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಇರಾನ್‌ ಪ್ರಕಟಿಸಿದೆ. ಮುಂದಿನ ಅರವತ್ತು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಘೋಷಣೆ ಮಾಡುವುದಾಗಿ ಅಲ್ಲಿನ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ದಶಕಗಳ ಕಾಲದಿಂದ ಇರಾನ್‌ ಅನ್ನು ಮಣಿಸಲು ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ಕೈಗೊಂಡ ಶಾಂತಿ ಪ್ರಕ್ರಿಯೆಯ ಕ್ರಮಗಳೆಲ್ಲ ವಿಫ‌ಲವಾಗುವ ಸುಳಿವು ಸಿಕ್ಕಿದೆ. ಇರಾನ್‌ ಉಪ ವಿದೇಶ ಸಚಿವ ಅಬ್ಟಾಸ್‌ ಅರಾಗ್ಚಿ ಮಾತನಾಡಿ, ಬಿಕ್ಕಟ್ಟಿನ ಹೊರತಾಗಿಯೂ ಐರೋಪ್ಯ ಒಕ್ಕೂಟದ ಜತೆಗೆ ಸಚಿವ ಮಟ್ಟದ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಇದೇ ವೇಳೆ ವೇಳೆ ಶನಿವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರನ್‌ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಜತೆಗೆ ಮಾತನಾಡಿ, 15ರ ಒಳಗಾಗಿ ಇರಾನ್‌ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಜತೆಗೆ ಶಾಂತಿ ಮಾತುಕತೆ ಪುನಾರಂಭಿಸುವ ಬಗ್ಗೆ ಚರ್ಚ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next