Advertisement
ಯುಆರ್ ರಾವ್ ಅವರು ವೈಜ್ಞಾನಿಕ ಅಷ್ಟೇ ಅಲ್ಲದೇ ವೈಚಾರಿಕ ಚಿಂತನೆಯನ್ನು ಹೊಂದಿದ್ದರು. ಕನ್ನಡಿಗರೊಬ್ಬರು ಈ ಸ್ಥಾನಕ್ಕೆ ಏರಿರುವುದು ಹೆಮ್ಮೆಯ ವಿಚಾರ. ಯುಆರ್ ರಾವ್ ನಿಧನ ತುಂಬಲಾರದ ನಷ್ಟವಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿ, ವಿಧಾನ ನೆರವೇರಿಸಲಾಗುವುದು ಎಂದು ಸಿಎಂ ಹೇಳಿದರು.
ಸರ್ಕಾರಿ ಗೌರವಗಳೊಂದಿಗೆ ಇಂದಿರಾನಗರ ಮನೆಯಿಂದ ಯುಆರ್ ರಾವ್ ಅವರ ಪಾರ್ಥಿವ ಶರೀರವನ್ನು ಇಸ್ರೋಗೆ ತರಲಾಯಿತು. ಅಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಮೇಯರ್, ಇಸ್ರೋ ಮಾಜಿ ನಿರ್ದೇಶಕರಾದ ರಾಧಾಕೃಷ್ಣನ್, ಕಸ್ತೂರಿ ರಂಗನ್, ಅಧ್ಯಕ್ಷರಾದ ಕಿರಣ್ ಕುಮಾರ್, ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ವಸತಿ ಸಚಿವ ಎಂ ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಮೊದಲಾದ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
Related Articles
Advertisement
ಯುಆರ್ ರಾವ್ ಅವರ ಪಾರ್ಥಿವ ಶರೀರವನ್ನು ಹೆಬ್ಬಾಳದ ವಿದ್ಯುತ್ ಚಿತಾಗಾರಕ್ಕೆ ರವಾನಿಸಲಾಗಿದೆ