ನೀವು ಹೊಸ ಕಾರು ಖರೀದಿಸುವ ಪ್ಲ್ಯಾನ್ ಮಾಡುತ್ತಿದ್ದಿರಾ? ನಿವು ಹೊಸ ಕಾರುಗಳು ಮೇಲಿರುವ ಆಫರ್ ಗಳನ್ನು ಎದುರು ನೋಡುತ್ತಿದ್ದಿರಾ? ಹಾಗಾದರೆ ತಡವೇಕೆ ? ಜನಪ್ರಿಯ ಕಾರುಗಳ ಉತ್ಪಾದಕ ಕಂಪನಿ ಮಹಿಂದ್ರಾ ತನ್ನ ಕಾರುಗಳ ಮೇಲೆ ಬಂಪರ್ ರಿಯಾಯಿತಿಯ ಆಫರ್ ಗಳನ್ನು ಘೋಷಿಸಿದೆ.
ಮಹೀಂದ್ರಾ ಕಂಪೆನಿ ಬಿಎಸ್6 ಕಂಪ್ಲೈಂಟ್ ಕಾರುಗಳಲ್ಲಿ ಕೆಲವು ಲಾಭದಾಯಕ ಆಫರ್ ಘೋಷಿಸಿದೆ. ಅಧಿಕೃತ ವೆಬ್ಸೈಟ್ನಲ್ಲಿ ಗ್ರಾಹಕರಿಗೆ 3.06 ಲಕ್ಷದವರೆಗೆ ರಿಯಾಯಿತಿಯನ್ನು ನೀಡಿದೆ. ಕೆಯುವಿ100 ನೆಕ್ಸ್ಟ್ನಿಂದ ಆಲ್ತುರಾಸ್ ಜಿ4 ಪ್ರಮುಖ ಎಸ್ಯುವಿವರೆಗಿನ ಕಾರುಗಳ ಮೇಲೆ ನಗದು ಕೊಡುಗೆಯನ್ನು ನೀಡಿದೆ. ಜೊತೆಗೆ ಎಕ್ಸ್ಚೇಂಜ್- ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ಪಡೆಯುವ ಅವಕಾಶ ಒದಗಿಸಿದೆ.
ಈ ಸುವರ್ಣಾವಕಾಶ ಇದೇ ತಿಂಗಳು (ಏಪ್ರಿಲ್) 30 ರ ವರೆಗೆ ಮಾತ್ರ ಲಭ್ಯ ಇರಲಿದೆ. ಮಹೀಂದ್ರಾ ಕೆಯುವಿ 100 ಎನ್ ಎಕ್ಸ್ ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ಪಟ್ಟಿ ಮಾಡಿದೆ, ಅದರಲ್ಲಿ ಗರಿಷ್ಠ ಅನುಕೂಲ 62,055ವರೆಗಿನ ಲಾಭಗಳನ್ನು ಹೊಂದಿದೆ. ಗ್ರಾಹಕರಿಗೆ ಇದರಿಂದಾಗಿ 38,055 ರೂ ವರೆಗಿನ ಲಾಭ, 20 ಸಾವಿರ ವರೆಗಿನ ಬೋನಸ್ ಜೊತೆಗೆ 4 ಸಾವಿರ ರೂ ವರೆಗಿನ ರಿಯಾಯಿತಿಯನ್ನು ನೀಡುತ್ತಿದೆ. ಈ ವಿನಾಯಿತಿಯ ಆಫರ್ ಗಳು ಥಾರ್ ಹಾಗೂ TUV300 ಕಾರುಗಳಿಗೆ ಅನ್ವಯಿಸುವುದಿಲ್ಲ.
ಯಾವ ಕಾರುಗಳಿಗೆ ಅಪ್ಲೈ ?
Mahindra KUV100 NXT, XUV300, XUV500, Scorpio, Marazzo, Bolero and the flagship Alturas G4 ಕಾರುಗಳಿಗೆ ಈ ಬಂಪರ್ ಆಫರ್ ಅನ್ವಯವಾಗಲಿದೆ.