Advertisement

ಉದ್ಯೋಗಾಕಾಂಕ್ಷಿಗಳಿಗೆ ಯುಪಿಎಸ್‌ಸಿಯಲ್ಲಿ ಒಟಿಆರ್‌ ಸೌಲಭ್ಯ

07:40 PM Aug 24, 2022 | Team Udayavani |

ನವದೆಹಲಿ: ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವವರಿಗೆ ಒಂದು ಖುಷಿಯ ಸುದ್ದಿ ಉಂಟು. ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮೂಲಕ ನಡೆಸುವ ಪರೀಕ್ಷೆಗಳನ್ನು ಬರೆಯುವವರು ಒಂದು ಬಾರಿ ಮಾತ್ರ (ಒಟಿಆರ್‌) ನೋಂದಣಿ ಮಾಡಿದರೆ ಸಾಕು.

Advertisement

ಇದರಿಂದಾಗಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ನಿಗದಿತ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ಪ್ರತಿ ಬಾರಿಯೂ ವೈಯಕ್ತಿಕ ವಿವರಗಳನ್ನು ನಮೂದಿಸುವ ಅಗತ್ಯ ಇಲ್ಲ.ಒಬ್ಬ ಉದ್ಯೋಗಾಕಾಂಕ್ಷಿ ಒಂದು ಬಾರಿ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾನೆ.

ಈ ಸಂದರ್ಭದಲ್ಲಿ ಪ್ರತಿಬಾರಿಯೂ ವೈಯಕ್ತಿಕ ವಿವರಗಳನ್ನು ನಮೂದಿಸಬೇಕಾಗುತ್ತದೆ. ಒನ್‌ ಟೈಮ್‌ ರಿಜಿಸ್ಟ್ರೇಷನ್‌ (ಒಂದು ಬಾರಿ ನೋಂದಣಿ) ವ್ಯವಸ್ಥೆಯಲ್ಲಿ ಅಭ್ಯರ್ಥಿ ತನ್ನ ವಿವರಗಳನ್ನು ನೋಂದಣಿ ಮಾಡಿದರೆ ಸಾಕು. ಇದರಿಂದಾಗಿ ಅವರಿಗೆ ಸಮಯದ ಉಳಿತಾಯ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸುಲಭವಾಗುತ್ತದೆ.

//upsc.gov.in ಮತ್ತು //upsconline.nic.in ವೆಬ್‌ಸೈಟ್‌ಗಳಲ್ಲಿ 24 ಗಂಟೆ ಕೂಡ ನೋಂದಣಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ನಮೂದು ಮಾಡಲಾಗಿರುವ ಮಾಹಿತಿ ಸೇವ್‌ ಆಗಿ ಇರುತ್ತದೆ ಎಂದು ಆಯೋಗ ಬುಧವಾರ ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next