Advertisement

ಇಂಟರ್‌ನೆಟ್‌ನಲ್ಲಿ UPSC ಪರೀಕ್ಷಾ ಅಂಕ, ಖಾಸಗಿ ನೇಮಕಾತಿಗೆ ಉತ್ತೇಜನ

05:33 PM Jul 20, 2017 | Team Udayavani |

ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ, ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಸಂಸ್ಥೆಗಳು ತಾವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳ ಅಂಕಗಳನ್ನು ಇಂಟರ್‌ನೆಟ್‌ನಲ್ಲಿ ಹಂಚಿಕೊಳ್ಳುವಂತೆ ಸರಕಾರ ಸೂಚಿಸಿದೆ.

Advertisement

ಖಾಸಗಿ ವಲಯದ ಸಂಸ್ಥೆಗಳು ನೇಮಕಾತಿ ನಡೆಸುವಾಗ ಅಭ್ಯರ್ಥಿಗಳ ಈ ಅಂಕಗಳನ್ನು ಬಳಸಿಕೊಳ್ಳುವಂತೆ ಮಾಡುವುದು ಸರಕಾರದ ಪ್ರಯತ್ನವಾಗಿದೆ.

ಸರಕಾರಿ ನೇಮಕಾತಿ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳನ್ನು ಇಂಟರ್‌ನೆಟ್‌ನಲ್ಲಿ ಸಾರ್ವಜನಿಕವಾಗಿ ದೊರಕುವಂತೆ ಮಾಡುವ ಮೂಲಕ ಖಾಸಗಿ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯನ್ನು ಉತ್ತೇಜಿಸುವುದು, ಪ್ರತಿಭಾವಂತರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸುಲಭವಾಗುವುದೆಂಬದು ಸರಕಾದ ಲೆಕ್ಕಾಚಾರವಾಗಿದೆ. 

ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಮೀಸಲು ವೆಬ್‌ ಸೈಟ್‌ ಒಂದರ ಮೂಲಕ ಸಾರ್ವಜನಿಕವಾಗಿ ಲಭಿಸುವಂತೆ ಮಾಡುವ ನೀತಿ ಆಯೋಗದ ಪ್ರಸ್ತಾವವೊಂದಕ್ಕೆ ಕೇಂದ್ರ ಸರಕಾರ ಕಳೆದ ವರ್ಷವೇ ಅನುಮತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next