Advertisement
ರಾಜ್ಯದ ಸೌಭಾಗ್ಯ ಬೀಳಗಿಮಠ 101ನೇ ರ್‍ಯಾಂಕ್ ಪಡೆದಿದ್ದಾರೆ. ಉಳಿದಂತೆ ನಾಗೇಂದ್ರ ಕುಮಾರ್ ಬಾಬು (160), ಯಶಸ್ವಿನಿ ಆರ್ (379), ಶಾಶಂತ್ ಎನ್. ಎಂ (459), ಪೂಜಾ ಧನುಷ್ (480), ಸತೀಶ್ ಶ್ರೀಶೈಲ್ ಸೊಮ್ಜಲ್, ಮೇಘನಾ ಐ.ಎಂ. (589), ಡಾ| ಭಾನು ಪ್ರಕಾಶ್ (600), ಸುಮಾ ಎಚ್. ಕೆ. (635), ಶಾಂತಪ್ಪ ಕುರುಬರ (644), ತೇಜಸ್ ಎನ್ (668), ಪ್ರಮೋದ್ ಆರಾಧ್ಯ ಎಚ್. ಆರ್ (671), ವೈಶಾಖ್ ಭಾಗಿ (684), ನವ್ಯ ಕೆ. (696), ಮೇಘನಾ ಕೆ.ಟಿ. (721), ಚಂದನ್ ಬಿ. ಎಸ್. (731), ವಿವೇಕ್ ರೆಡ್ಡಿ ಎನ್. (741), ಸೃಷ್ಟಿ ದೀಪ್ (748), ಲೇಖನ್ ಎಂ. (777), ತೇಜಸ್ವಿನಿ ಎನ್. (787), ರಕ್ಷಿತ್ ಕೆ. ಗೌಡ (802), ಹಂಸಶ್ರೀ ಎನ್.ಎ.(866), ಸಂಪ್ರಿತ್ ಸಂತೋಷ್ (868), ಅಭಿಷೇಕ್ ಕೆ. ಎಚ್. (901), ವಸಂತ್ ಕುಮಾರ್ ಜಿ. (902), ಟಿ. ವಿಜಯ್ ಕುಮಾರ್ (953), ತನುಜ್ ಕುಮಾರ್ ಕೆ (973) ರ್‍ಯಾಂಕ್‌ನೊಂದಿಗೆ ಯುಪಿಎಸ್‌ಸಿ ನೇಮಕಾತಿಗೆ ಅರ್ಹತೆ ಪಡೆದಿದ್ದಾರೆ. ಹಾಗೆಯೇ ಹಲವರು ಅನ್ಯ ರಾಜ್ಯಗಳಲ್ಲಿ ಕೋಚಿಂಗ್ ಪಡೆದು ಯುಪಿಎಸ್‌ಸಿ ಬರೆದಿದ್ದಾರೆ. ಈಗಾಗಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತರಬೇತಿ ಪಡೆಯುತ್ತಿದ್ದು ಉತ್ತಮ ರ್‍ಯಾಂಕಿಂಗ್ ಪಡೆಯುವ ಗುರಿಯೊಂದಿಗೆ ಮತ್ತೆ ಯುಪಿಎಎಸ್‌ಸಿ ಪರೀಕ್ಷೆ ಬರೆದು ಪ್ರಯತ್ನ ಮಾಡಿರುತ್ತಾರೆ. ಹೀಗಾಗಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕನ್ನಡಿಗರ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಂಭವವಿದೆ.
ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳು ಗ್ರಾಮದ ಶಾಂತಪ್ಪ ಕುರುಬರ ಕನ್ನಡ ಮಾಧ್ಯಮದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದು 644ನೇ ರ್‍ಯಾಂಕ್ ಪಡೆದಿದ್ದಾರೆ. ಈ ಹಿಂದೆ 7 ಬಾರಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೂ, ವೈಯಕ್ತಿಕ ಸಂದರ್ಶನ ಪರೀಕ್ಷೆಯಲ್ಲಿ 2 ಬಾರಿ ತೇರ್ಗಡೆಯಾಗಿರಲಿಲ್ಲ. ಸತತ 8ನೇ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ. ವಿಶೇಷ ಎಂದರೆ ಶಾಂತಪ್ಪ ಪಿಯುಸಿಯಲ್ಲಿ ಒಮ್ಮೆ ಫೇಲಾಗಿದ್ದರು. ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬ್ಯಾಂಕ್‌ನಲ್ಲಿ ಮ್ಯಾನೇಜರ್ ಹುದ್ದೆ, ಅರಣ್ಯ ಇಲಾಖೆಯಲ್ಲಿ ಎಫ್‌ಡಿಎ ಕೆಲಸ ಸಿಕ್ಕಿದ್ದರೂ, ಸಾರ್ವಜನಿಕರ ಸೇವೆ ಮಾಡುವ ಉದ್ದೇಶದಿಂದ ಎರಡೂ ಕೆಲಸಕ್ಕೆ ಸೇರದೆ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ 2017ರಲ್ಲಿ ಪೊಲೀಸ್ ಇಲಾಖೆ ಸೇರಿದ್ದಾರೆ. ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ಪಿಎಸ್‌ಐ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.