Advertisement

UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ

04:27 PM Dec 23, 2024 | Team Udayavani |

ನವದೆಹಲಿ: ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯದ ಕುರಿತು ನಕಲಿ ಪ್ರಮಾಣಪತ್ರ ನೀಡಿರುವ ಆರೋಪದ ಮೇಲೆ ಮಾಜಿ ಐಎಎಸ್ ಟ್ರೈನಿ ಪೂಜಾ ಖೇಡ್ಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರ(ಡಿ.23) ವಜಾಗೊಳಿಸಿದೆ.

Advertisement

ಪೂಜಾ ಖೇಡ್ಕರ್ ಅವರ ಮೇಲೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಉಮೇದುವಾರಿಕೆಯನ್ನು ಭದ್ರಪಡಿಸಿಕೊಳ್ಳಲು ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಕೋಟಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಇವರ ಮೇಲಿದೆ ಈ ಸಂಬಂಧ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಸೋಮವಾರ(ಡಿ.23) ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಯ ಉದ್ದೇಶಗಳು ಅಧಿಕಾರಿಗಳನ್ನು ವಂಚಿಸುವುದು ಜೊತೆಗೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವುದು ಅಷ್ಟುಮಾತ್ರವಲ್ಲದೆ ಇದರ ಹಿಂದೆ ದೊಡ್ಡ ಪಿತೂರಿ ನಡೆಸುವ ಉದ್ದೇಶವು ಅಡಗಿದೆ ಎಂದು ಹೇಳಿದೆ.

ಪೂಜಾ ಖೇಡ್ಕರ್ ಕೇಳಿಬಂದ ವಿವಾದಗಳು:

– ಪೂಜಾ ತಮಗೆ ದೃಷ್ಟಿದೋಷ, ಮಾನಸಿಕ ಅನಾರೋಗ್ಯ ಇರುವುದಾಗಿ ಹೇಳಿಕೊಂಡಿದ್ದರು ಮತ್ತು ನೇಮಕಾತಿಯಲ್ಲಿ ಅದರಿಂದ ಲಾಭ ಮಾಡಿಕೊಂಡಿದ್ದರು.

Advertisement

– ತಂದೆ ಐಎಎಸ್‌ ಅಧಿಕಾರಿಯಾಗಿದ್ದರೂ ಪೂಜಾ ಒಬಿಸಿ (ನಾನ್‌ ಕ್ರೀಮಿ ಲೇಯರ್‌) ಕೋಟಾದಡಿ ಎಂಬಿಬಿಎಸ್‌ಗೆ ಸೀಟು ಪಡೆದುಕೊಂಡಿದ್ದರು.

– ಜೂನ್ 3ರಂದು ಪುಣೆ ಜಿಲ್ಲಾ ಸಹಾಯಕ ಕಂದಾಯ ಅಧಿಕಾರಿಯಾಗಿ ತರಬೇತಿ ಆರಂಭಿಸಿದ ಪೂಜಾ, ಅಧಿಕಾರವನ್ನು ಮೀರಿ ತಮ್ಮ ಖಾಸಗಿ ಕಾರಿಗೆ, ಕೆಂಪು-ನೀಲಿ ಬೀಕನ್‌ ಬಳಸಿದ್ದಾರೆ. ಹೆಚ್ಚುವರಿ ಕಂದಾಯ ಅಧಿಕಾರಿಯ ಒಪ್ಪಿಗೆ ಇಲ್ಲದೇ ಅವರ ಕಚೇರಿ ಸ್ವಾಧೀನಪಡಿಸಿಕೊಂಡಿದ್ದು, ಅನುಮತಿ ಇಲ್ಲದೇ ಕಚೇರಿಯ ಪೀಠೊಪಕರಣಗಳನ್ನು ಬದಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next