Advertisement

ಯುಪಿಎಸ್ಸಿ: 25ನೇ ರ್‍ಯಾಂಕ್‌ ಪಡೆದ ಆಸಿಫ್ಗೆ ಸನ್ಮಾನ

05:39 PM Jun 14, 2017 | |

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಫೇಸ್‌ಬುಕ್‌, ವಾಟ್ಸ್‌ಪ್‌ ಗಳಲ್ಲಿ ಕಾಲಹರಣ ಮಾಡದೇ ಓದಿನ ಕಡೆ ಲಕ್ಷé ವಹಿಸಿ ಶ್ರದ್ಧೆ ಮೈಗೂಢಿಸಿಕೊಂಡರೆ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 25ನೇ ಹಾಗೂ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದ ಶೇಖ್‌ ತನ್ವೀರ್‌ ಆಸಿಫ್‌ ಹೇಳಿದರು. 

Advertisement

ಪ್ರಾಥಮಿಕ ಶಿಕ್ಷಣ ಪಡೆದ ನಗರದ ಸರ್ಕಾರಿ ಮುದ್ರಣಾಲಯದ ಎದುರು ಇರುವ ಕಲಿತ ನೊಬೆಲ್‌ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತನ್ನ ಬಾಲ್ಯಾವಸ್ಥೆ ಹೇಳಿಕೊಳ್ಳುವ ಹಾಗಿರಲಿಲ್ಲ. ಶಾಲಾ ಶುಲ್ಕ ಪಾವತಿಸಲು ಮನೆಯವರು ಸಾಕಷ್ಟು ಕಷ್ಟ ಪಡುತ್ತಿದ್ದರು.

ಏಳನೇ ತರಗತಿ ವರೆಗೆ ಶೇ. 70ರಷ್ಟು ಅಂಕ ಪಡೆದೆ. 8ನೇ ತರಗತಿಗೆ ಸೇರುವಾಗ ತಾಯಿ ಶಾಲೆ ಪ್ರವೇಶ ಶುಲ್ಕ ಕಟ್ಟಲು ಕಷ್ಟಪಡುತ್ತಿದ್ದುದನ್ನು ನೋಡಿ ಮನಸ್ಸಿನ ಮೇಲೆ ಪರಿಣಾಮ ಬೀರಿತು ಎಂದರು. ಬೆಂಗಳೂರಿನಲ್ಲಿ ತಾಂತ್ರಿಕ ಕಾಲೇಜು ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿ ಅಲ್ಲಿನ ಭಿಕ್ಷುಕರು ಹಾಗೂ ನಿರ್ಗತಿಕರನ್ನು ಕಂಡು ಜೀವ ತಳಮಳಗೊಂಡಿತು.

ಈ ಸಮಸ್ಯೆ ನಿವಾರಣೆಗೆ ಐಎಎಸ್‌ಗೆ ಹೋಗಲು ನಿರ್ಧರಿಸಿದೆ ಎಂದು ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ಮುಕ್ಸಾಫ್‌ ಸಿತಾರಾ, ಖಜಾಂಚಿ ಮೊಹ್ಮದ್‌ ಮುಸಿಬುದ್ದೀನ್‌, ಪಾಶಾ, ಮೊಹ್ಮದ್‌ ಮೆರಾಜುದ್ದೀನ್‌, ಪ್ರಾಚಾರ್ಯರಾದ ನುಝಾತ್‌ ಸಲಾವುದ್ದೀನ್‌, ಉಪ ಪ್ರಾಚಾರ್ಯರಾದ ನಸ್ರಿನ್‌ ಫಜ್ರಾನ್‌, ಶೇಖ್‌ ತನ್ವೀರ್‌ ಆಸಿಫ್‌ ಹಾಜರಿದ್ದರು.

ಶೇಖ್‌ ತನ್ವೀರ್‌ ಅವರನ್ನು ತಾಯಿ ಜೈನಾಬ್‌ ಫಾತಿಮಾ ಅವರೊಂದಿಗೆ ಸನ್ಮಾನಿಸಲಾಯಿತು. ಶಿಕ್ಷಕರಾದ ನುಸ್ರಿàನ್‌, ಯಾಸ್ಮಿನ್‌, ಶಶಿಕಲಾ, ಸಾಹೀರ್‌, ಅಲಿಯಾ, ಸಾμಯಾ, ಅನುರಾಧಾ, ಸಾಯಿ ಪ್ರಸನ್ನ, ಲಕ್ಷಿ, ಜ್ಯೋತಿ, ಫರಹತ್‌, ನμàಜ್‌ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next