Advertisement
1964ರ ಕರ್ನಾಟಕ ಭೂಕಂದಾಯ ಕಾಯ್ದೆ ಮತ್ತು ನಿಯಮಾವಳಿ 1966ರನ್ವಯ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನವಾಗುತ್ತಿದೆ. ಕಂದಾಯ ಇಲಾಖೆಯ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಜಾರಿಗೊಳಿಸುತ್ತಿರುವ ಯೋಜನೆಗೆ ಮೊದಲ ಸುತ್ತಿನಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಮಂಗಳೂರು ನಗರ ಆಯ್ಕೆಯಾಗಿವೆ. ಯೋಜನೆಯಡಿ ನಗರ ಪ್ರದೇಶ ವ್ಯಾಪ್ತಿಯ ಪ್ರತಿ ಆಸ್ತಿಯನ್ನು ಅಳತೆ ಮಾಡಿ ನಕ್ಷೆ ಸಿದ್ಧಪಡಿಸಲಾಗುತ್ತದೆ. ಅದರಂತೆ ಈ ಮೂರು ನಗರಗಳಲ್ಲಿ ಆಸ್ತಿ ಅಳತೆ ಕಾರ್ಯ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು.
Related Articles
Advertisement
ಯೋಜನೆಯ ಪ್ರಯೋಜನಯುಪಿಒಆರ್ ಯೋಜನೆಯಿಂದಾಗಿ ಸರ್ಕಾರಿ ಆಸ್ತಿಗಳನ್ನು ಗುರುತಿಸಲು ಹಾಗೂ ಸಂರಕ್ಷಿಸಲು ನೆರವಾಗಲಿದೆ. ಜತೆಗೆ ಮಹಾನಗರ ಪಾಲಿಕೆಗಳು ಹಾಗೂ ನಗರ ಪಾಲಿಕೆಗಳು ಸೂಕ್ತ ಆಸ್ತಿ ತೆರಿಗೆ ಸಂಗ್ರಹಣೆಗೂ ನಿಖರ ಮಾಹಿತಿ (ಡೇಟಾಬೇಸ್) ಸಿದ್ಧವಾಗಲಿದೆ. ನಗರ ಪ್ರದೇಶಗಳಲ್ಲಿನ ಆಸ್ತಿಗಳ ಸ್ವರೂಪ, ಭೌಗೋಳಿಕ ಸ್ಥಿತಿ, ಪ್ರತಿ ಆಸ್ತಿಯ ನಿಖರ ವಿಸ್ತೀರ್ಣದ ಮಾಹಿತಿಯೂ ಸಿಗುತ್ತದೆ. ಜತೆಗೆ ಆಸ್ತಿಗಳಿಗೆ ಸಂಬಂಧಪಟ್ಟ ಅನಗತ್ಯ ವ್ಯಾಜ್ಯಗಳು ಕ್ರಮೇಣ ಕಡಿಮೆಯಾಗಲಿವೆ ಎಂದು ತಿಳಿಸಿದರು. ಬೆಂಗಳೂರಿನಲ್ಲೂ ಅನುಷ್ಠಾನ: ಬೆಂಗಳೂರಿನ 198 ವಾರ್ಡ್‌ಗಳ ಪೈಕಿ ಆಯ್ದ 50 ವಾರ್ಡ್‌ಗಳಲ್ಲಿ ಯುಪಿಒಆರ್ ಯೋಜನೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಮೊದಲಿಗೆ ನಗರದ ಒಂದು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.