Advertisement

ಉಪ್ಪುಂದ: ಗಂಟಲಲ್ಲಿ ಚಾಕ್ಲೇಟ್‌ ಸಿಲುಕಿ ಬಾಲಕಿ ಸಾವು: ವೈದ್ಯಕೀಯ ವರದಿಯಲ್ಲಿ ಕಾರಣ ಬಯಲು

07:38 PM Aug 06, 2022 | Team Udayavani |

ಉಪ್ಪುಂದ: ಚಾಕ್ಲೇಟ್‌ ನುಂಗಿ ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿದ್ದ 6 ವರ್ಷದ ಬಾಲಕಿ ಸಮನ್ವಿ ಸಾವಿಗೆ ವೈದ್ಯಕೀಯ ವರದಿ ತಿರುವು ನೀಡಿದೆ.

Advertisement

ಸಮನ್ವಿ ಸಾವಿನ ಹಿಂದಿರುವ ನಿಜವಾದ ಕಾರಣ ವೈದ್ಯಕೀಯ ಪರದಿಯಲ್ಲಿ ದೃಢವಾಗಿದೆ. ಆ ಮೂಲಕ ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದ, ನಿಗೂಢವಾಗಿಯೇ ಇದ್ದ ವಿದ್ಯಾರ್ಥಿನಿ ಸಮನ್ವಿ ಸಾವಿನ ರಹಸ್ಯ ಬಯಲಾಗಿದೆ. ಹುಟ್ಟಿನಿಂದಲೇ ಆಕೆಗೆ ಹೃದಯ ಸಂಬಂಧಿ ಸಮಸ್ಯೆಯಿತ್ತು ಎಂದು ವೈದ್ಯಕೀಯ ವರದಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಜಾರ್ಖಂಡ್‌: ನ್ಯಾಯಾಧೀಶರನ್ನು ಕೊಂದಿದ್ದವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಸಿಬಿಐ ಕೋರ್ಟ್

ಘಟನೆಯ ವಿವರ: ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಕಬ್ಸೆಯ ಶಮಿತ್ – ಸಮನ್ವಿ ನಿಲಯದ ನಿವಾಸಿ ಸುಪ್ರೀತಾ ಪೂಜಾರಿ ಎಂಬುವರ ಮಗಳು ಸಮನ್ವಿ (6) ಉಪ್ಪುಂದದ ಖಾಸಗಿ ಶಾಲೆಯ ವಿದ್ಯಾರ್ಥಿನಿ. ಜುಲೈ 20, 2022ರ ಬುಧವಾರ ಬೆಳಿಗ್ಗೆ ಎಂದಿನಂತೆ ಶಾಲೆಗೆ ಹೋಗಲು ಸಮವಸ್ತ್ರ ಧರಿಸಿದ್ದಳು. ಬಳಿಕ ಏನಾಯಿತೋ ಏನೋ ಅಮ್ಮಾ ಇವತ್ತು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ. ಬಾಲಕಿ ಸಮನ್ವಿಗೆ ಅಮ್ಮ ಚಾಕ್ಲೇಟ್‌ ಕೊಟ್ಟು ಸಮಾಧಾನಪಡಿಸಿದ್ದಾಳೆ. ಚಾಕ್ಲೇಟ್‌ ಬಾಯಲ್ಲಿದ್ದಂತೆ ಶಾಲೆಯ ಬಸ್ ಬಂದ ಕಾರಣ ತಾಯಿ ಮಗ ಶಮಿತ್ ನ ಕೈಹಿಡಿದುಕೊಂಡು, ಸಮನ್ವಿಯನ್ನು ಎತ್ತಿಕೊಂಡು ಬಸ್ ಬಳಿ ಬಂದಿದ್ದಾರೆ. ಬಸ್ ಬಳಿ ಸಮನ್ವಿಯನ್ನು ಇಳಿಸುತ್ತಲೇ ಆಕೆ ಕುಸಿದು ಬಿದ್ದಿದ್ದಾಳೆ. ಇದರಿಂದ ಆತಂಕಗೊಂಡ ಮನೆಯವರು, ಶಾಲಾ ವಾಹನದ ಡ್ರೈವರ್, ಸಹ ವಿದ್ಯಾರ್ಥಿಗಳು, ಎಲ್ಲರೂ ಸೇರಿದ್ದಾರೆ. ಆದರೆ ಮಗು ಏಳಲೇ ಇಲ್ಲ. ಬಳಿಕ ಬೈಂದೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸಮನ್ವಿ ತೀರಿಕೊಂಡಿರುವುದು ದೃಢವಾಗಿತ್ತು.

ಆದರೆ ಸಮನ್ವಿ ಸಾವಿಗೆ ನಿಜವಾದ ಕಾರಣ ಹುಡುಕುವುದು ಕಷ್ಟವಾಗಿತ್ತು. ಬಾಯಲ್ಲಿ ಚಾಕಲೇಟ್ ಇದ್ದಿದ್ದರಿಂದ ಚಾಕ್ಲೇಟ್‌ ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಸಾವನ್ನಪ್ಪಿದ್ದಾಳೆ ಎಂದೇ ತಿಳಿಯಲಾಗಿತ್ತು. ಬಳಿಕ ಬೈಂದೂರು ಪೊಲೀಸರು ಮಣಿಪಾಲದಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಎಫ್.ಎಸ್.ಎಲ್. ವರದಿಗಾಗಿ ಕಳಿಸಲಾಗಿತ್ತು. ಇದೀಗ ವರದಿ ಪೊಲೀಸರ ಕೈ ಸೇರಿದ್ದು, ಬಾಲಕಿಗೆ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಬಾಲಕಿ ಸಮನ್ವಿ ಸಾವಿನ ನಿಜ ಕಾರಣ ಬಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next