Advertisement

ಉಪ್ಪಿನಂಗಡಿ: ಗ್ರಾಮ ಕರಣಿಕರ ಕಚೇರಿ ಕಾರ್ಯಾರಂಭ

02:02 PM May 25, 2018 | Team Udayavani |

ಉಪ್ಪಿನಂಗಡಿ: ಸಾರ್ವಜನಿಕ ಸೇವೆಗೆ ಒಳಪಟ್ಟ ಗ್ರಾಮಕರಣಿಕರ ಕಚೇರಿ ಪಂಚಾಯತ್‌ ಕಟ್ಟಡಕ್ಕೆ ಗುರುವಾರ ಸ್ಥಳಾಂತರಗೊಂಡು ಕಾರ್ಯಾಚರಣೆ ಆರಂಭಿಸಿದೆ. ಎರಡು ವರ್ಷಗಳಿಂದ ಗ್ರಾಮಕರಣಿಕರ ಕಚೇರಿ ಕಂದಾಯ ಇಲಾಖೆಯ ವಸತಿ ಗೃಹದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿತ್ತು.

Advertisement

ಪಂ. ಕಚೇರಿಯ ನಿವೇಶನಕ್ಕೆ ತಾಗಿ ಕೊಂಡು ಇದ್ದ ತೀರಾ ಹಳೆಯ ಕಟ್ಟಡದಲ್ಲಿ ಈ ಕಚೇರಿ ಇತ್ತು. ನೂತನ ಪಂಚಾಯತ್‌ ಕಟ್ಟಡ ರಚನೆ ವೇಳೆ ಗ್ರಾಮ ಕರಣಿಕರ ಕಚೇರಿಯನ್ನೂ ಕೆಡವಲಾಗಿತ್ತು. ಹೊಸ ಕಟ್ಟಡದಲ್ಲಿ ಎರಡು ಕೊಠಡಿಗಳನ್ನು ಗ್ರಾಮ ಕರಣಿಕರ ಕಚೇರಿಗಾಗಿ ರಚಿಸಿಕೊಟ್ಟಿದ್ದರೂ ಪೀಠೊಪಕರಣ ಹಾಗೂ ವಿಂಗಡನೆಯ ಸಲಕರಣೆಗಳಿಗೆ ಸರಕಾರದಿಂದ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಈ ಕಚೇರಿ ಕಾರ್ಯಾರಂಭ ಮಾಡಿರಲಿಲ್ಲ. ಗ್ರಾ.ಪಂ. ಅಧ್ಯಕ್ಷ ಅಬ್ದುಲ್‌ ರಹಿಮಾನ್‌ ಅವರೇ ವಿಶೇಷ ಮುತುವರ್ಜಿ ವಹಿಸಿ, ಸ್ವಂತ ಖರ್ಚಿನಿಂದ ಗ್ರಾಮ ಕರಣಿಕರ ಕಚೇರಿಗೆ ಪೀಠೊಪಕರಣ ಒದಗಿಸಿದ್ದಾರೆ.

ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದು, ಮಕ್ಕಳಿಗೆ ಆದಾಯ, ವಾಸ್ತವ್ಯ ಇತ್ಯಾದಿ ದಾಖಲೆ ನೀಡಲು ಗ್ರಾಮ ಕರಣಿಕರ ಕಚೇರಿಯಲ್ಲಿ ವ್ಯವಸ್ಥೆ ಇಲ್ಲದಿದ್ದರೆ ಸಮಸ್ಯೆಯಾಗುತ್ತದೆ ಎಂಬುದನ್ನು ಮನಗಂಡು ಸರಕಾರದ ಅನುದಾನಕ್ಕೆ ಕಾಯದೆ ಪೀಠೊಪಕರಣ ಒದಗಿಸಿದ್ದಾಗಿ ಪಂ. ಅಧ್ಯಕ್ಷರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next