Advertisement
ಸುಮಾರು 11 ಮನೆಗಳಿರುವ ಈ ಕಾಲನಿಯ ಜನ ಒಂದು ತೊಟ್ಟು ಕುಡಿಯುವ ನೀರಿಗಾಗಿ ಒಂದು ಕಿ.ಮೀ. ದೂರ ಅಲೆದಾಡುವ ದುಃಸ್ಥಿತಿ ಬಂದೊದಗಿದೆ. ಕುಡಿಯಲು ನೀರು ಕೊಡಿ ಎಂದು ಅದೆಷ್ಟೇ ಗೋಗರೆದರೂ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪಂಚಾಯತ್ ಆಡಳಿತದಿಂದ ಸಕಾರಾತ್ಮಕ ಪ್ರಯತ್ನ ನಡೆಯಲಿಲ್ಲ.
Related Articles
Advertisement
ನಮ್ಮ ಬವಣೆ ಕೇಳುವವರಿಲ್ಲಒಂದೂವರೆ ತಿಂಗಳಿಂದ ಕುಡಿಯಲೂ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕರಾಯ ಗ್ರಾಮದ ಪಡ್ಡಾಯಿಬೆಟ್ಟು ಕಾಲನಿಯ ನಿವಾಸಿಗರಾದ ನಮ್ಮ ಬಗ್ಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ. ಇಲ್ಲಿ ನೀರು ಮಾತ್ರವಲ್ಲ, ದಾರಿದೀಪವೂ ಇಲ್ಲ, ರಸ್ತೆಯೂ ಸಮರ್ಪಕವಾಗಿಲ್ಲ. ನಮ್ಮ ಬೇಡಿಕೆಗಳಿಗೆಲ್ಲ ಭರವಸೆಯೇ ಲಭಿಸುವುದು ವಿನಾ ಸ್ಪಂದನೆ ದೊರೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಗಾ ಕಲ್ಯಾಣ ಅನುಷ್ಠಾನದಲ್ಲಿತು
ಕಾಲನಿಯ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸಮಸ್ಯೆಇದೆ ಎನ್ನಲಾದ ಕಾಲನಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೀಗ ನೀರು ಬತ್ತಿ ಹೋಗಿ ಸಮಸ್ಯೆ ಉದ್ಭವಿಸಿರುವ ಬಗ್ಗೆ ಪಂಚಾಯತ್ ಆಡಳಿತಕ್ಕೆ ದೂರು ಬಂದಿಲ್ಲ. ಸಮಸ್ಯೆ ಬಗೆಹರಿಸುವಲ್ಲಿ
ಗಮನ ಹರಿಸಲಾಗುವುದೆಂದು ತಿಳಿಸಿದ್ದಾರೆ. ಎಂ.ಎಸ್. ಭಟ್