Advertisement

ಉಪ್ಪಿನಂಗಡಿ: ಹಳೆಯ ಕಟ್ಟಡದಲ್ಲಿ ಶುದ್ಧ ನೀರು ಘಟಕ; ಬಳಕೆ ಶೂನ್ಯ

01:08 PM Oct 26, 2018 | |

ಉಪ್ಪಿನಂಗಡಿ: ಸರಕಾರದ ಯೋಜನೆಯಡಿ ಕುಡಿಯುವ ನೀರು ಘಟಕ ಆರಂಭಗೊಳ್ಳುವ ಮುನ್ನವೇ ತುಕ್ಕು ಹಿಡಿದ ಬಾಗಿಲಿನಿಂದ ಮುಚ್ಚಿಕೊಂಡಿದೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದ್ದರಿಂದ ಮೂರು ವರ್ಷಗಳಿಂದ ಕಾಮಗಾರಿ ಕುಂಠಿತವಾಗಿದ್ದು, ಕೊನೆಗೂ ಹರಕೆ ಸಂದಾಯ ಆಗಿದೆಯೇ ಹೊರತು, ಸಾರ್ವಜನಿಕ ಸೇವೆಗೆ ಲಭ್ಯವಾಗಿಲ್ಲ. ಒಂದು ರೂ. ನಾಣ್ಯ ಹಾಕಿದರೆ 10 ಲೀ. ಶುದ್ಧ ನೀರು ಪೂರೈಸುವ ಮೂಲಕ ಸಮಾಜದ ಆರೋಗ್ಯ ಕಾಪಾಡುವ ಯೋಜನೆ ಗ್ರಾಮಕ್ಕೆ ಬಂದಿದೆ. ಆದರೆ, ಈವರೆಗೆ ಅದರಿಂದ ಒಂದು ಹನಿ ನೀರೂ ಸಿಕ್ಕಿಲ್ಲ ಎನ್ನುವುದು ವಾಸ್ತವ.

Advertisement

ಉಪ್ಪಿನಂಗಡಿ ಪಟ್ಟಣದ ಹೃದಯ ಭಾಗದಲ್ಲಿರುವ ಬಸ್‌ ನಿಲ್ದಾಣ ಸಮೀಪ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದ ರಿಕ್ಷಾ ಪಾರ್ಕಿಂಗ್‌ ಸ್ಥಳದಲ್ಲಿ ಈ ಘಟಕ ಕಾಣಿಸುತ್ತಿಲ್ಲ. ಗುತ್ತಿಗೆದಾರರು ಒಂದು ಮುರುಕು ಕಟ್ಟಡದಲ್ಲಿ, ತುಕ್ಕು ಹಿಡಿದ ಬಾಗಿಲು ಪೋಣಿಸಿ, ಈ ಘಟಕವನ್ನಿಟ್ಟು ಮರಳಿದ್ದಾರೆ. ಆದರೆ, ಯಂತ್ರ ಉಪಯೋಗಕ್ಕೆ ಬಂದಿಲ್ಲ.

ಕಾಮಗಾರಿ ಆರಂಭದಲ್ಲಿ ಗುತ್ತಿಗೆದಾರರು ಎಲ್ಲ ಸಾಮಗ್ರಿಗಳನ್ನು ತಂದು ಪಂಚಾಯತ್‌ನ ಸಂಗ್ರಹ ಕೊಠಡಿಯಲ್ಲೇ ಇರಿಸಿದ್ದರು. ವರ್ಷಕ್ಕೆ ಒಂದು ಸಲ ಒಂದಿಷ್ಟು ಕೆಲಸಗಾರರನ್ನು ಕರೆತಂದು ಅವುಗಳನ್ನು ಜೋಡಿಸಲು ಮೂರು ವರ್ಷ ಹಿಡಿದಿದೆ. ಈ ಘಟಕ ಸದ್ಬಳಕೆ ಆಗುವಂತೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next