Advertisement

ಉಪ್ಪಿನಂಗಡಿ ಪೊಲೀಸ್‌ ಠಾಣೆ ತಾತ್ಕಾಲಿಕವಾಗಿ ಸ್ಥಳಾಂತರ

04:00 PM Nov 04, 2017 | |

ಉಪ್ಪಿನಂಗಡಿ: ಶತಮಾನದಷ್ಟು ಇತಿಹಾಸ ಹೊಂದಿರುವ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಹಳೆ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿದ್ದು, ತಾತ್ಕಾಲಿಕವಾಗಿ ವೃತ್ತ ನಿರೀಕ್ಷಕರ ವಸತಿ ಕಟ್ಟಡಕ್ಕೆ ಸ್ಥಳಾಂತರಗೊಂಡ ಪೊಲೀಸ್‌ ಠಾಣೆ ಶುಕ್ರವಾರ ಆರಂಭಗೊಂಡಿತು.

Advertisement

ಪೊಲೀಸ್‌ ಗೃಹ ಮಂಡಳಿಯಿಂದ ಠಾಣೆಯ ಕಟ್ಟಡಕ್ಕಾಗಿ 91 ಲಕ್ಷ ರೂ. ಮಂಜೂರಾಗಿದ್ದು, ಕಟ್ಟಡ ಕಾಮಗಾರಿಗೆ ಮುನ್ನ ಸ್ಥಳಾಂತರಕ್ಕಾಗಿ ಪಕ್ಕದ ನೆಕ್ಕಿಲಾಡಿಯ ವಾಣಿಜ್ಯ ಸಂಕೀರ್ಣವನ್ನು ಗೊತ್ತು ಪಡಿಸ ಲಾಗಿತ್ತು. ಆದರೆ ಕಟ್ಟಡದ ಬಾಡಿಗೆಗೆ ಇಲಾಖಾನುಮತಿ ದೊರೆಯದ ಕಾರಣ ಠಾಣೆಯ ಹಿಂಭಾಗದಲ್ಲಿನ ವೃತ್ತ ನಿರೀಕ್ಷಕರ ವಸತಿ ಕಟ್ಟಡಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

ಉಪ್ಪಿನಂಗಡಿ ಪೊಲೀಸ್‌ ಠಾಣೆಯು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಹೀಗೆ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ನ್ನೊಳಗೊಂಡ 33 ಗ್ರಾಮಗಳನ್ನು ಹಾಗೂ ದ.ಕ. ಜಿಲ್ಲಾ ಗಡಿಯಾದ ಶಿರಾಡಿಯಿಂದ ಬಂಟ್ವಾಳ ತಾಲೂಕಿನ ಅಮೈವರೆಗೆ ಸುಮಾರು 55 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next