Advertisement

Uppinangady: ಕಾರ್ಮಿಕನ ಕೊ*ಲೆ; ಆರೋಪಿ ಬಂಧನ

12:15 AM Dec 12, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಬಸ್‌ ನಿಲ್ದಾಣದ ಬಳಿಯ ಗ್ರಾ.ಪಂ. ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಗ್ರಂಥಾಲಯ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್‌ ಬೆಂಗರ (34) ಅವರನ್ನು ಕೊಲೆಗೈದ ಪ್ರಕರ ಣದ ಆರೋಪಿ ಬಾಬು ಯಾನೆ ರುದ್ರ (68) ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಕೆಲವು ಸಮಯ ಹಿಂದೆ ಸ್ಥಳೀಯ ಬಾರ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಕಟ್ಟಡ ನಿರ್ಮಾ ಣ ಕಾರ್ಮಿಕನಾಗಿದ್ದ.

ಅಸ್ಸಾಂನ ತಿಮ್ಮತಿ ಬೆಂಗರ ಅವರ ಮಗ ದೀಪಕ್‌ ಬೆಂಗರ ಕಳೆದ ಬುಧವಾರ ಕೊಲೆಗೀಡಾದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದರು. ದೀಪಕ್‌ ನಿರ್ಗತಿಕನಂತೆ ಬೀದಿ ಬದಿ, ಜನವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸ್‌ ಇಲಾಖೆಗೆ ಕಗ್ಗಂಟಾಗಿತ್ತು. ಪೊಲೀಸರು ಬಸ್‌ ನಿಲ್ದಾಣ ಪರಿಸರದಲ್ಲಿನ ಸಿಸಿ ಕೆಮರಾಗಳ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ಶಂಕಿತ ಆರೋಪಿಯ ಚಲನವಲನಗಳು ಪತ್ತೆಯಾಗಿದ್ದವು.
ಈ ಕಾರಣದಿಂದ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ಮನೆ ನಿವಾಸಿ ಬಾಬು ಯಾನೆ ರುದ್ರನನ್ನು ಉಳ್ಳಾಲ ತಾಲೂಕಿನ ದೇರಳಕಟ್ಟೆಯಲ್ಲಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್‌., ಎಸ್‌ಐ ಅವಿನಾಶ್‌ ಎಚ್‌., ಸಿಬಂದಿಗಳಾದ ಶಿವರಾಮ್‌, ಹಿತೋಷ್‌, ಗಿರೀಶ್‌, ರಾಮಣ್ಣ ಗೌಡ, ಹೇಮರಾಜ್‌, ಮಹದೇವ, ನಾಗರಾಜ್‌, ಪ್ರವೀಣ್‌ ರೈ, ಹರೀ ಶ್ಚಂದ್ರ, ತಾಂತ್ರಿಕ ವಿಭಾಗದ ದಿವಾಕರ್‌ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಬಂದವ ಕೊಲೆ ಮಾಡಿದ
ಮಂಗಳವಾರ ರಾತ್ರಿ ಬಸ್‌ ನಿಲ್ದಾಣ ಪರಿಸರದಲ್ಲಿ ಅಲೆಯುತ್ತಿದ್ದ ಆರೋಪಿ, ಕಳ್ಳತನ ಪ್ರಕರಣದಲ್ಲಿ ಪೊಲೀಸ್‌ ಇಲಾಖೆಗೆ ಬೇಕಾಗಿದ್ದ ಈತ ರಾತ್ರಿ ಗಸ್ತು ನಿರತ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಬಸ್‌ ನಿಲ್ದಾಣ ಪರಿಸರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವನ್ನು ಪ್ರವೇಶಿಸಿ ಅಲ್ಲಿ ಮಲಗಲು ಮುಂದಾಗಿದ್ದ. ಸ್ವಲ್ಪ ಹೊತ್ತಿನ ಬಳಿಕ ಆ ವೇಳೆಗಾಗಲೇ ಅಲ್ಲಿ ಮಲಗಿದ್ದ ದೀಪಕ್‌ ಬೆಂಗರ ಎಚ್ಚರಗೊಂಡು ಅಲ್ಲಿ ಮಲಗದಂತೆ ಗದರಿಸಿದ್ದ.

Advertisement

ಈತ ಇಲ್ಲಿಯ ಕಾವಲುಗಾರನಿರಬಹುದೆಂದು ಅಂದಾಜಿಸಿ ಅಲ್ಲಿಂದ ಮತ್ತೆ ಬಸ್‌ ನಿಲ್ದಾಣಕ್ಕೆ ಬಂದಿದ್ದ ಹಂತಕ, ತನ್ನ ಪ್ಯಾಂಟಿನ ಜೇಬಿನಲ್ಲಿದ್ದ ಹಣ ಮತ್ತು ಮೊಬೈಲ್‌ ಕಣ್ಮರೆಯಾಗಿ ರುವುದನ್ನು ಕಂಡು ಅಲ್ಲಿ ಮಲಗಿರುವ ದೀಪಕ್‌ ಬೆಂಗರನೇ ಅದೆಲ್ಲವನ್ನೂ ಕದ್ದಿರಬೇಕೆಂದು ವಾಪಸು ಬಂದು ಆತನೊಂದಿಗೆ ವಾಗ್ವಾದಕ್ಕೆ ಇಳಿದಿದ್ದ. ಬಳಿಕ ಬೇರೆಡೆಗೆ ತೆರಳಿದ ಆರೋಪಿ ಬಾಬು ಬಳಿಕ ಸಮೀಪದ ಹೊಟೇಲೊಂದರ ಬಳಿಯಿಂದ ದೊಣ್ಣೆಯನ್ನು ತಂದು ಮಲಗಿದ್ದ ದೀಪಕ್‌ ಬೆಂಗರನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದ.

Advertisement

Udayavani is now on Telegram. Click here to join our channel and stay updated with the latest news.

Next