Advertisement
ರಾಜ್ಯದಲ್ಲೇ ಮೊದಲೆಂಬ ಹೆಗ್ಗಳಿಕೆ ಪಡೆದುಕೊಂಡ ಮಿನಿ ವಿಧಾನಸೌಧ ಸ್ವರೂಪದ ನೂತನ ಪಂ. ಕಟ್ಟಡ ಮಾ.5ರಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತ್ತು. ಆದರೆ ಪೀಠೊಪಕರಣಗಳ ವ್ಯವಸ್ಥಿತ ಜೋಡಿಸುವಿಕೆಗಾಗಿ ನೂತನ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿರಲಿಲ್ಲ. ಆದರೆ ಹಳೇ ಪೀಠೊಪಕರಣಗಳನ್ನೇ ಜೋಡಿಸಿ ಎ. 6 ರಂದು ಪಂ. ಕಚೇರಿಯನ್ನು ನೂತನ ಕಟ್ಟಡಕ್ಕೆ ದಿಢೀರ್ ಎಂಬಂತೆ ವರ್ಗಾಯಿಸಲಾಗಿದೆ.
ಪಂ. ಕಚೇರಿ ಸ್ಥಳಾಂತರದ ಕುರಿತು ಪಂ. ಸದಸ್ಯರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿಲ್ಲ. ಈ ಕಾರಣದಿಂದ ಓರ್ವ ಸದಸ್ಯೆ ಈ ಹಿಂದಿನ ಬಾಡಿಗೆ ಕಟ್ಟಡದಲ್ಲೇ ಪಂ.ಕಚೇರಿ ಇದೆ ಎಂದು ನಂಬಿ ಅಲ್ಲೇ ಕಾಯುತ್ತಿದ್ದರು. ನೂತನ ಕಟ್ಟಡದಲ್ಲಿ ಪಂಚಾಯತ್ ಕಚೇರಿ ಪ್ರಾರಂಭಗೊಂಡ ಹಿನ್ನೆಲೆ ಯಲ್ಲಿ ಪಂಚಾಯತ್ ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ಪಂಚಾ ಯತ್ ಸಿಬಂದಿ ಪೇಡಾ ವಿತರಿಸಿ ಬರಮಾಡಿಕೊಂಡರು. ಪಂಚಾಯತ್ ಸದಸ್ಯರು ಚುನಾವಣಾ ನೀತಿ ಸಂಹಿತೆಯಿಂದಾಗಿ ಯಾವುದೇ ಕಾರ್ಯದಲ್ಲೂ ಕಾಣಿಸಿಕೊಳ್ಳಲಿಲ್ಲ.