Advertisement

ಪರಿಶೀಲನೆಗೆ ಬಂದವರ ತಡೆದ ಪ್ರಾಂಶುಪಾಲರು!

07:38 AM Jan 12, 2019 | Team Udayavani |

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಹೈಸ್ಕೂಲ್‌ ಕಟ್ಟಡವೊಂದಕ್ಕೆ ತಾಗಿಕೊಂಡು ಅಪಾಯದ ಅಂಚಿನಲ್ಲಿದ್ದ ಮರವನ್ನು ಕಡಿಯುವ ಉದ್ದೇಶದಿಂದ ಪರಿಶೀಲನೆಗೆ ಬಂದಿದ್ದ ಅರಣ್ಯ ಸಿಬಂದಿಯನ್ನು ಶಾಲೆಯ ಪ್ರಾಂಶುಪಾಲರು ತಡೆದಿದ್ದಾರೆ.

Advertisement

ವರದಿ ಪ್ರಕಟಿಸಿದ್ದ ಉದಯವಾಣಿ’
ಮರವನ್ನು ಕಡಿಸಲು ಹೋಗಿದ್ದ ಅರಣ್ಯ ರಕ್ಷಕನ ಭಾವಚಿತ್ರ ತೆಗೆದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಹೈಸ್ಕೂಲ್‌ ವಿಭಾಗದ ವಿದ್ಯಾರ್ಥಿಗಳ ಶಿಕ್ಷಣ ಪಡೆಯುವ ಕೊಠಡಿಗಳಿಗೆ ತಾಗಿಕೊಂಡ ಅಪಾಯಕಾರಿ ಮರದ ಕುರಿತು ‘ಉದಯವಾಣಿ’ ಸುದಿನ ವರದಿ ಮಾಡಿತ್ತು. ಈ ವರದಿಯನ್ನು ಆಧರಿಸಿ ಉಪ್ಪಿನಂಗಡಿ ವಲಯಾಧಿಕಾರಿಯವರು ಕ್ರಮ ಕೈಗೊಂಡು ಅರಣ್ಯ ರಕ್ಷಕರನ್ನು ಪರಿಶೀಲನೆಗೆ ಕಳುಹಿಸಿದ್ದರು.

ಅರಣ್ಯ ರಕ್ಷಕ ಸುಧೀರ್‌ ಅವರು, ಸ್ಥಳೀಯ ಗುತ್ತಿಗೆದಾರರ ಮೂಲಕ ಅಪಾಯ ಅಂಚಿನಲ್ಲಿದ್ದ ಮರವನ್ನು ತೆರವುಗೊಳಿಸುವು ದಾಗಿ ಭರವಸೆ ನೀಡಿದರು. ಆದರೆ ಹೈಸ್ಕೂಲ್‌ನ ಪ್ರಾಂಶುಪಾಲರು ಅರಣ್ಯ ರಕ್ಷಕನ ಭಾವ ಚಿತ್ರವನ್ನು ಮೊಬೈಲ್‌ನಲ್ಲಿ ತೆಗೆದಿದ್ದು, ನೀವು ಯಾರು ಎಂದು ನನಗೆ ತಿಳಿಯಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮರವನ್ನು ಶಾಲೆಯವರೇ ಕಡಿಯಲಿ ಅದರ ವೆಚ್ಚವನ್ನು ಇಲಾಖೆ ಭರಿಸುವುದಾಗಿ ಆದೇಶವನ್ನು ಪ್ರಾಂಶುಪಾಲರಿಗೆ ನೀಡಲಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ.

ವಾರದಲ್ಲಿ ತೆರವಿಗೆ ಕ್ರಮ
ಅರಣ್ಯ ಇಲಾಖೆಯಿಂದ ಮರವನ್ನು ತೆರವುಗಳೊಳಿಸಲು ಅದೇಶ ಪತ್ರ ಕೈ ಸೇರಿದೆ. ಮರ ಕಡಿತಕ್ಕೆ ತಗಲುವ ವೆಚ್ಚ ನೀಡುವುದಾಗಿ ಅರಣ್ಯ ಇಲಾಖೆಯವರು ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಮುಂದಿನ ಏಳು ದಿನಗಳಲ್ಲಿ ಮರ ತೆರವುಗೊಳಿಸಲಾಗುವುದು.
ಶಿವಬಾಳು, ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next