Advertisement

ಎಡಿಟಿಂಗ್ ಸೂಟ್ ನಲ್ಲಿ ಉಪ್ಪಿ ‘ಯು-ಐ’ ಸಿನಿಮಾ

04:24 PM Aug 01, 2023 | Team Udayavani |

ಉಪೇಂದ್ರ ನಿರ್ದೇಶನದ “ಯು-ಐ’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಈಗ ಉಪೇಂದ್ರ ಶೂಟಿಂಗ್‌ ಸ್ಪಾಟ್‌ನಿಂದ ಎಡಿಟಿಂಗ್‌ ಸೂಟ್‌ಗೆ ಶಿಫ್ಟ್ ಆಗಿದ್ದಾರೆ.

Advertisement

ಹೌದು, ಸದ್ಯ ಕನ್ನಡ ಚಿತ್ರರಂಗದಲ್ಲಿ ಭರ್ಜರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಉಪೇಂದ್ರ ಅವರ “ಯು-ಐ’ ಚಿತ್ರ ಕೂಡಾ ಸೇರಿದೆ ದೊಡ್ಡ ಗ್ಯಾಪ್‌ನ ನಂತರ ಉಪೇಂದ್ರ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ.

ಸಿನಿಮಾದ ಮುಹೂರ್ತ ದಿನವೇ ವಿಭಿನ್ನ ಗೆಟಪ್‌ನಲ್ಲಿ ಗಮನ ಸೆಳೆದಿದ್ದ ಉಪ್ಪಿ ಅಂಡ್‌ ಟೀಂ ಯಾವ ರೀತಿಯ ಸಿನಿಮಾ ಮಾಡಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿದೆ. ಉಪೇಂದ್ರ ನಿರ್ದೇಶನದ ಸಿನಿಮಾದ ಪ್ರತಿ ಅಂಶಗಳು ಕೂಡಾ ಚಿತ್ರಮಂದಿರಕ್ಕೆ ಬರುವವರೆಗೆ ತುಂಬಾ ಸೀಕ್ರೆಟ್‌ ಆಗಿಯೇ ಇರುತ್ತವೆ. ಈ ಬಾರಿಯೂ “ಯು-ಐ’ ಸಿನಿಮಾದ ಸೀಕ್ರೆಟ್‌ ಅನ್ನು ಇಡೀ ಚಿತ್ರತಂಡ ಕಾಪಾಡಿಕೊಂಡಿದೆ.

ಇದನ್ನೂ ಓದಿ:Lokmanya Tilak Award: ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಂಡ ಶರದ್ ಪವಾರ್

ಸದ್ಯ ಎಡಿಟಿಂಗ್‌ ಟೇಬಲ್‌ನಲ್ಲಿ ಸಂಕಲನಕಾರರ ಜೊತೆ ಉಪ್ಪಿ ಹಾಗೂ ಅವರ ತಂಡ ಕುಳಿತಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಚಿತ್ರವನ್ನು ವೀನಸ್‌ ಎಂಟರ್‌ಟೈನರ್ ಹಾಗೂ ಲಹರಿ ಫಿಲಂಸ್‌ ಜಂಟಿಯಾಗಿ ನಿರ್ಮಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next