Advertisement

ಉಪ್ಪಳಿಕೆರೆ ಈಗ ಕಸದ ತೊಟ್ಟಿ

04:48 PM Nov 29, 2019 | Suhan S |

ಎಚ್‌.ಡಿ.ಕೋಟೆ: ಪಟ್ಟಣದ ಹೃದಯಭಾಗ ಎಚ್‌.ಬಿ.ರಸ್ತೆ ಬದಿಯಲ್ಲಿ ಪುರಸಭೆ ಕಚೇರಿಮುಂಭಾಗದ ಉಪ್ಪಳಿಕೆರೆ ಎಂದೇ ಖ್ಯಾತಿ ಯಾಗಿದ್ದ ಕೆರೆ ಈಗ, ಸ್ಥಳೀಯ ಪುರಸಭೆ ತಾತ್ಕಾಲಿಕ ವಾರದ ಸಂತೆ ಸೇರಿದಂತೆ ಪ್ರತಿದಿನ ಮಾಂಸ ಮಾರಾಟ ಮಾಡುವ ಕೇಂದ್ರ ಸ್ಥಾನವಾಗಿ ಮಾರ್ಪಾಡಾಗಿದೆ.

Advertisement

ಒತ್ತುವರಿ: ಈ ಹಿಂದೆ ವಿಶಾಲವಾದ ವಿಸ್ತೀರ್ಣ ಹೊಂದಿದ್ದ ಸರ್ವೆ ನಂ 14ರ ಉಪ್ಪಳಿಕೆರೆ ಜಾಗ ಈ ಹಿಂದೆ ಇಡೀ ವರ್ಷ ಜಲಾವೃತ್ತವಾಗಿನೀರು ಬೋರ್ಗರೆದು ಹರಿಯುತ್ತಿತ್ತು. ವರ್ಷ ಗಳು ಉರುಳಿದಂತೆ, ಬಲಾಡ್ಯರು ಕೆರೆ ನೀರು ಹರಿಯುತ್ತಿದ್ದ ಜಾಗ ಒತ್ತುವರಿ ಜೊತೆಗೆ ಶಿಫಾರಸ್ಸಿನಿಂದ ಕೆರೆ ಜಾಗ ತಮ್ಮದಾಗಿಸಿ ಕೊಂಡಿದ್ದಾರೆ. ಹೀಗಾಗಿ ಈಗ ಸುಮಾರು 2.14 ಎಕರೆ ವಿಸ್ತೀರ್ಣ ಹೊಂದಿರುವ ಉಪ್ಪಳಿಕೆರೆ ಜಾಗದಲ್ಲಿ 30ಗುಂಟೆ ಖಾಸಗಿ ವಾಹನಗಳ ನಿಲುಗಡೆಗೆ ಮತ್ತು 3.5ಗುಂಟೆ ಎಂಡಿಸಿಸಿ ಬ್ಯಾಂಕ್‌ಗೆ ಗೊತ್ತುಪಡಿಸಲಾಗಿದೆ.  ಇನ್ನುಳಿದ 1.21 ಎಕರೆ ಜಾಗದಲ್ಲಿ ಪ್ರತಿಮಂಗಳವಾರದ ಸಂತೆ ಜಾಗ ಗೊತ್ತುಪಡಿಸುವ ತನಕ ತಾತ್ಕಾಲಿಕವಾಗಿ ಸದರಿ ಜಾಗದಲ್ಲಿ ವಾರದ ಸಂತೆ ನಡೆಯುವುದು ಹೊರತು ಪಡಿಸಿದರೆ ಇನ್ನುಳಿದ ದಿನಗಳಲ್ಲಿ ಇಡೀ ಸಂತೆ ಜಾಗ ಖಾಲಿಖಾಲಿ ಬಿದ್ದಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಉಪ್ಪಳಿಕೆರೆ ಜಾಗಕ್ಕೆ ಹೊಂದಿಕೊಂಡಂತಿರುವ ಖಾಸಗಿ ಅಂಗಡಿ ಮುಂಗಟ್ಟು, ಹೋಟೆಲ್‌ಗ‌ಳ ಕಲುಷಿತ ನೀರನ್ನು ಸಂತೆ ಮೈದಾನದ ಜಾಗದಲ್ಲಿ ಹರಿಯ ಬಿಟ್ಟಿದ್ದಾರೆ.

ಗಬ್ಬೆದ್ದು ನಾರುತ್ತಿದೆ: ಅಷ್ಟೇ ಅಲ್ಲದೆ ಖಾಸಗಿ ವ್ಯಕ್ತಿಗಳು ದಿನನಿತ್ಯ ಬಳಕೆ ಮಾಡಿದ ಘನ ತ್ಯಾಜ್ಯವಸ್ತು ಸೇರಿದಂತೆ ಬೇಡವಾದ ಇನ್ನಿತರ ತ್ಯಾಜ್ಯಗಳನ್ನು ಈ ಜಾಗದಲ್ಲಿ ರಾಜಾರೋಷವಾಗಿ ತಂದು ಸುರಿಯುತ್ತಿದ್ದಾರೆ. ಪ್ರತಿದಿನ ನೂರಾರು ಮಂದಿ ರಸ್ತೆ ಹೋಕರು ಸಂತೆ ಮೈದಾನದ ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ಇಡೀಜಾಗ ಕಲುಷಿತಗೊಂಡು ಗಬ್ಬೆದ್ದು ನಾರುತ್ತಿದೆ. ಕ್ರಮಕ್ಕೆ ಮುಂದಾಗಲಿ: ಈ ಮಾರ್ಗವಾಗಿ ಸಂಚರಿಸುವ ಮಂದಿ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆಇದ್ದರೂ ಕೂಗಳತೆ ದೂರದಲ್ಲಿರುವ ಪುರಸಭೆ ಮಾತ್ರ ಶುಚಿತ್ವಕ್ಕೆ ಮುಂದಾಗಿಲ್ಲ. ಹಂದಿ, ಬೀದಿ ನಾಯಿ, ರಾಸುಗಳ ಆವಾಸ ಸ್ಥಾನವಾಗಿರುವ ಉಪ್ಪಳಿಕೆರೆ ಜಾಗದಲ್ಲಿ ಘನತ್ಯಾಜ್ಯ ಸೇರಿ ಕಸಕಡ್ಡಿ ಹಾಕುವವರ ವಿರುದ್ಧ ಪುರಸಭೆ ಕ್ರಮಕ್ಕೆ ಮುಂದಾಗ ಬೇಕು. ಎಲ್ಲೆಂದರಲ್ಲಿ ವಿನಾಕಾರಣ ಬೇಡ ವಾದ ತ್ಯಾಜ್ಯಗಳನ್ನು ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಂಡು ಶುಚಿತ್ವ ಕಾಪಾಡಬೇಕಿದೆ.

ತಾತ್ಕಾಲಿಕ ಸಂತೆ ಮೈದಾನದ ಅಭಿವೃದ್ಧಿಗಾಗಿ ಈ ಹಿಂದೆ 34ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೈದಾನಕ್ಕೆ ಕಾಂಪೌಂಡ್‌ ನಿರ್ಮಿಸಲು ಅನುಮೋದನೆ ಪಡೆದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಇತ್ತೀಚೆಗೆಬರಪರಿಹಾರ ಹಿನ್ನೆಲೆಯಲ್ಲಿ ಸರ್ಕಾರ ಅನುದಾನ ಹಿಂಪಡೆದಿದ್ದರಿಂದ ಅಭಿವೃದ್ಧಿ ನೆನಗುದಿಗೆ ಬಿದ್ದಿದೆ. ಎಚ್‌.ಸಿ.ನರಸಿಂಹಮೂರ್ತಿ, ಪುರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next