Advertisement

ಉಪ್ಲೇರಿ ಧರ್ಮ ಕೋಲಕ್ಕೆ ಚಾಲನೆ

08:23 PM Apr 28, 2019 | Team Udayavani |

ಬದಿಯಡ್ಕ: ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಪಂಚ ವರ್ಷಗಳಿಗೊಮ್ಮೆ ಜರಗುವ ಧರ್ಮ ಕೋಲೋತ್ಸವಕ್ಕೆ ಚಾಲನೆ ನೀಡಲಾಯಿತು. ಇದರಂಗವಾಗಿ ಕುಂಟಾಲುಮೂಲೆ ಶ್ರೀ ಆದಿಶಕ್ತಿ ಅಯ್ಯಪ್ಪ ಮಂದಿರದ ಪರಿಸರದಿಂದ ನಡೆದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಪೆರುಮುಂಡ ಶಂಕರನಾರಾಯಣ ಭಟ್‌ ಉದ್ಘಾಟಿಸಿದರು
.

Advertisement

ಮಂದಿರದ ಗುರುಸ್ವಾಮಿ ನಾರಾಯಣ ಮಣಿಯಾಣಿ, ಪದ್ಮನಾಭ ಮಣಿಯಾಣಿ ಉಪಸ್ಥಿತರಿದ್ದರು. ‌ ಧಾರ್ಮಿಕ ಸಭೆಯನ್ನು ಬ್ರಹ್ಮ ಶ್ರೀ ವೇದಪ್ರವೀಣ ಪುರಸ್ಕೃತ ತಂತ್ರಿವರ್ಯರಾದ ಪುರೋಹಿತ ರತ್ನ ಬಿ.ಕೇಶವ ಆಚಾರ್ಯ ಉದ್ಘಾಟಿಸಿದರು. ಬಾಳೆಕೋಡಿ ಶಿಲಾಂಜನ ಕ್ಷೇತ್ರದ ಡಾ.ಸದ್ಗುರು ಶ್ರೀ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಆಶೀರ್ವಚನ ನೀಡಿ ಯಾವುದೇ ಆಚರಣೆ ಆಡಂಬರದ ಪ್ರತೀಕವಾಗದೆ ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಪಡಿಯಚ್ಚಾಗಿರಬೇಕು. ಹಿಂದಿನಂತೆ ಸರಳತೆಯಿಂದ ಕೂಡಿದ ಆಚಾರ ಅನುಷ್ಠಾನಗಳನ್ನು ನಮ್ಮ ಮಕ್ಕಳಿಗೆ ಕಲಿಸಬೇಕೇ ಹೊರತು ನಮ್ಮ ಸಿರಿವಂತಿಕೆಯ ಪ್ರದರ್ಶನವಾಗಬಾರದು ಎಂದು ಹೇಳಿದರು. ಸಂತೋಷ್‌ ಕುಮಾರ್‌ ಶೆಟ್ಟಿ ಬಾಕ್ರಬೈಲು ಸಭೆಯ ಅಧ್ಯಕ್ಷತೆ ವಹಿಸಿದರು. ಶಂಕರನಾರಾಯಣ ಭಟ್‌ ಕುಂಟಿಕಾನ, ಮೈರ್ಕಳ ನಾರಾಯಣ ಭಟ್‌, ಚೆನ್ನಪ್ಪ ಕುಲಾಲ್‌ ಎರುಗಲ್ಲು , ಅಶೋಕ್‌ ಕುಂಬಾxಜೆ ಮೊದಲಾದವರು ಮಾತನಾಡಿದರು.

ಉಪ್ಲೇರಿ ಮಂತ್ರ ಮೂರ್ತಿ ಗುಳಿಗ ಸೇವಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಕುಲಾಲ್‌ ವಾಂತಿಚ್ಚಾಲು ಸ್ವಾಗತಿಸಿ ರಾಮ ನಾಯ್ಕ ಕುಂಟಾಲುಮೂಲೆ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಚಿರಂಜೀವಿ ಯಕ್ಷಗಾನ ಕಲಾ ಸಂಘ ಕುಂಟಾಲುಮೂಲೆ ಅವರಿಂದ ಶ್ರೀಕೃಷ್ಣ ಲೀಲಾರ್ಣವ ಎಂಬ ಯಕ್ಷಗಾನ ಪ್ರದರ್ಶನ, ಡಿ.ಡಿ.ಆರ್‌.ಬೆಳ್ಳಿಗೆ ಅವರಿಂದ ನೃತ್ಯ ವೈವಿಧ್ಯ ಹಾಗೂ ಬೈರನ ಬದ್‌R ಎಂಬ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next