Advertisement
ಯುಪಿಐನ ಡಿಸೆಂಬರ್‌ನ ವಹಿವಾಟಿನಲ್ಲಿ ಫೋನ್‌ಪೇಯು ಗೂಗಲ್ ಪೇ ಅನ್ನು ಹಿಂದಿಕ್ಕಿದೆ. ಎನ್‌ಪಿಸಿಐನ ಮಾಹಿತಿಯ ಪ್ರಕಾರ, ಡಿಸೆಂಬರ್‌ನಲ್ಲಿ ಫೋನ್‌ಪೇ ಮೂಲಕ 90.20 ಕೋಟಿ ವಹಿವಾಟು ನಡೆದಿದೆ. ಇದು ತಿಂಗಳಿನ ಅತೀ ಹೆಚ್ಚಿನ ಪ್ರಮಾಣವಾಗಿದ್ದು ಗೂಗಲ್‌ಪೇ ಅನ್ನು ಹಿಂದಿಕ್ಕಿದೆ. ನವೆಂಬರ್‌ಗೆ ಹೋಲಿಸಿದರೆ ಫೋನ್‌ಪೇ ಡಿಸೆಂಬರ್‌ನಲ್ಲಿ ಶೇ. 3.87ರಷ್ಟು ಚೇತರಿಕೆ ಕಂಡಿದೆ.
Related Articles
Advertisement
ಗೂಗಲ್ ಮತ್ತು ಫೋನ್‌ಪೇ ಯುಪಿಐ ಮಾರುಕಟ್ಟೆಯನ್ನು ಬಹು ತೇಕ ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ಡಿಸೆಂಬರ್‌ನಲ್ಲಿ ನಡೆದ ಒಟ್ಟು ಯುಪಿಐ ವಹಿವಾಟಿನಲ್ಲಿ ಇವೆರಡು ಶೇ. 78ರಷ್ಟು ಪಾಲನ್ನು ಹೊಂದಿವೆ. 2,234.16 ಮಿಲಿಯನ್ ವ್ಯವಹಾರಗಳು ಯುಪಿಐ ಮೂಲಕ ನಡೆದಿದ್ದವು.
ಬಳಿಕದ ಸ್ಥಾನ ಯಾರ್ಯಾರಿಗೆ? :
ಮೂರನೇ ಸ್ಥಾನದಲ್ಲಿರುವ ಪೇಟಿಎಂ 25.63 ಕೋಟಿ ವಹಿವಾಟುಗಳ ನ್ನು ನಡೆಸಿದೆ. ಇದರ ಮೌಲ್ಯ 3.12 ಲಕ್ಷ ಕೋ. ರೂ. ಬಳಿಕದ ಸ್ಥಾನದಲ್ಲಿ 4 ಕೋಟಿ ವಹಿವಾಟು ನಡೆಸಿದ ಅಮೆಜಾನ್ ಮತ್ತು 2.4 ಕೋಟಿ ವಹಿವಾಟುಗಳನ್ನು ನಡೆಸಿದ ಭೀಮ್ ಆ್ಯಪ್ ಇವೆ.
ವಾಟ್ಸ್‌ಆ್ಯಪ್ ಪೇ :
ವಾಟ್ಸ್‌ಆ್ಯಪ್ ಪೇ ಒಟ್ಟು 29.7 ಕೋ. ರೂ. ಮೌಲ್ಯದ 8 ಲಕ್ಷ ವಹಿ ವಾಟುಗಳನ್ನು ಕಂಡಿದೆ. ನವೆಂಬರ್ ತಿಂಗಳಿನಲ್ಲಿ 3 ಲಕ್ಷದಷ್ಟು ವಹಿ ವಾಟು ಗಳನ್ನು ಮಾತ್ರ ನಡೆಸಿತ್ತು. ಯುಪಿಐ ಡಿಸೆಂಬರ್‌ನಲ್ಲಿ ಸತತ ಮೂರನೇ ತಿಂಗ ಳು 2 ಬಿಲಿಯನ್ ಗಡಿ ದಾಟಿದೆ. ಇದು ದಾಖಲೆಯ 4.16 ಟ್ರಿಲಿಯನ್ ರೂ. ಮೌಲ್ಯದ 2.23 ಬಿಲಿಯನ್ ವಹಿವಾಟುಗಳನ್ನು ನಿರ್ವಹಿಸಿದೆ.