Advertisement
ಇದರಿಂದ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ಗಳ ವರೆಗಿನ ವೈದ್ಯಕೀಯ ವೆಚ್ಚವನ್ನು ಯುಪಿಐ ಮೂಲಕ ಪಾವತಿಸುವುದು ಸಾಧ್ಯವಾಗಲಿದೆ. ಜತೆಗೆ ವೃತ್ತಿಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಇತ್ಯಾದಿ ಪಾವತಿಯೂ ಸುಲಭವಾಗಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಬಡ್ಡಿ ದರದಲ್ಲಿ ಸತತ ಐದನೇ ಬಾರಿಗೆ ಯಥಾಸ್ಥಿತಿ (ಶೇ. 6.5) ಕಾಯ್ದುಕೊಳ್ಳುವ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಂಡಿದೆ. ಇದರಿಂದ ರೆಪೋ ದರ ಇಳಿಕೆಯಾಗಿ ಬಡ್ಡಿ ದರ ಇಳಿಕೆಯ ನಿರೀಕ್ಷೆಯಲ್ಲಿದ್ದ ಗೃಹ, ವಾಹನ ಸಾಲಗಾರರಿಗೆ ನಿರಾಸೆಯಾಗಿದೆ.