Advertisement

UPI ಈಗ ವಿಶ್ವಮಾನ್ಯ: ವಿವಿಧ ದೇಶಗಳಲ್ಲಿ ಪಾವತಿ ವ್ಯವಸ್ಥೆಯಾಗಿ ಅಳವಡಿಕೆ

11:48 PM Jul 20, 2023 | Team Udayavani |

ದೇಶದಲ್ಲಿ ಜನಪ್ರಿಯಗೊಂಡಿರುವ ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ಆಧಾರಿತ ಪಾವತಿಗೆ ಈಗ ಜಗಮನ್ನಣೆ. ಸಿಂಗಾಪುರ, ಫ್ರಾನ್ಸ್‌, ಯುಎಇ­ ಸಹಿತ ಹಲವು ದೇಶಗಳು ತಮ್ಮ ಪಾವತಿ ವ್ಯವಸ್ಥೆಗೆ ಅದನ್ನು ಅಳವಡಿಸಿಕೊಂಡಿವೆ. ಈ ಬಗೆಗಿನ ಪಕ್ಷಿನೋಟ ಇಲ್ಲಿದೆ.

Advertisement

ಭೂತಾನ್‌ ಮೊದಲ ದೇಶ
ಭೀಮ್‌ (ಬಿಎಚ್‌ಐಎಂ) ಅನ್ನು ಜಾರಿಗೊಳಿಸುವ ಬಗ್ಗೆ ಎನ್‌ಸಿಪಿಐ ಭೂತಾನ್‌ ಜತೆ 2021ರಲ್ಲಿ ಒಪ್ಪಂದವಾಗಿತ್ತು. ನಮ್ಮ ದೇಶದ ಪಾವತಿ ವ್ಯವಸ್ಥೆ  ಯನ್ನು ಒಪ್ಪಿಕೊಂಡ ಮೊದಲ ವಿದೇಶಿ ರಾಷ್ಟ್ರ ಎಂಬ ಹೆಗ್ಗಳಿಕೆ ಭೂತಾನ್‌ ನದ್ದು.

13 ದೇಶಗಳೊಂದಿಗೆ ಒಪ್ಪಂದ
ಭಾರತವು ಈ ಕುರಿತು ಇನ್ನೂ 13 ದೇಶಗಳೊಂದಿಗೆ ಒಪ್ಪಂದಕ್ಕೆ ಮಾಡಿಕೊಂಡಿದೆ. ಜತೆಗೆ ಥೈಲ್ಯಾಂಡ್‌, ಫಿಲಿಫೈನ್ಸ್‌, ವಿಯೆಟ್ನಾಂ, ಕಾಂಬೋಡಿಯಾ, ಹಾಂಗ್‌ಕಾಂಗ್‌, ತೈವಾನ್‌, ದಕ್ಷಿಣ ಕೊರಿಯಾ, ಜಪಾನ್‌, ನೆದರ್‌ಲ್ಯಾಂಡ್ಸ್‌ ಸಹಿತ ಇನ್ನೂ ಕೆಲವು ದೇಶಗಳು ಯುಪಿಐ ಅಳವಡಿಸಿಕೊಳ್ಳಲು ಆಸಕ್ತಿ ತೋರಿವೆ.

ಯಾವೆಲ್ಲ ರಾಷ್ಟ್ರಗಳಲ್ಲಿ ಲಭ್ಯ?
ಆರ್‌ಬಿಐ ಮತ್ತು ಸಿಂಗಾಪುರದ ಮಾನಿಟರಿ ಅಥಾರಿಟಿ ಆಫ್ ಸಿಂಗಾಪುರ 2021ರ ಸೆಪ್ಟಂಬರ್‌ನಲ್ಲಿ ಪೇನೌ ಮತ್ತು ಯುಪಿಐ ಲಿಂಕ್‌ಗೆ ಸಮ್ಮತಿ. 2021ರಲ್ಲಿ ಬೆಂಗಳೂರು ಮೂಲದ ಮನಾಮ್‌ ಇನ್‌ ಫೋಟೆಕ್‌, ನೇಪಾಲದ ಗೇಟ್‌ವೇ ಪೇಮೆಂಟ್ಸ್‌ ಸರ್ವಿಸ್‌ ಒಪ್ಪಂದ.

2022ರ ಅಕ್ಟೋಬರ್‌ನಲ್ಲಿ ಒಮಾನ್‌ನಲ್ಲಿ ಜಾರಿ.
ರುಪೇ ಕಾರ್ಡ್‌, ಯುಪಿಐ ಒಪ್ಪಿಕೊಂಡ 7ನೇ ದೇಶ ಕೊಲ್ಲಿ ರಾಷ್ಟ್ರಗಳಲ್ಲಿ ಯುಪಿಐ ಸಂಬಂಧ ಎನ್‌ಪಿ ಸಿಐನ ಅಂತಾ ರಾಷ್ಟ್ರೀಯ ವಿಭಾಗ ಮಶ್ರೆಕ್‌ ಬ್ಯಾಂಕ್‌ನ ನಿಯೋ ಪೇ ಜತೆಗೆ ಒಪ್ಪಂದ.
ಮಲೇಷ್ಯಾ: 2021ರಲ್ಲಿ ಮರ್ಕೆಂ ಟ್ರೇಡ್‌ ಏಷ್ಯಾ ಜತೆ ಒಪ್ಪಂದ. ಅಲ್ಲಿ ಭೀಮ್‌, ಗೂಗಲ್‌ ಪೇ, ಅಮೆಜಾನ್‌ ಪೇ ಮೂಲಕ ಪಾವತಿ.
ಥಾಯ್ಲೆಂಡ್‌, ಹಾಂಕಾಂಗ್‌, ಜಪಾನ್‌ ನಲ್ಲೂ ಲಿಕ್ವಿಡ್‌ ಗ್ರೂಪ್‌ ಪಿಟಿಇ ಲಿ. ಎಂಬ ಸಂಸ್ಥೆ ಜತೆಗೂಡಿ ಉತ್ತರ ಏಷ್ಯಾ, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಅನುಷ್ಠಾನ.
ಪೇಎಕ್ಸ್‌ಪರ್ಟ್‌ ಮೂಲಕ ಯುಕೆಯಲ್ಲಿ ಸೇವೆ ಲಭ್ಯ.

Advertisement

ಭಾರತೀಯರಿಗೆ ಅನುಕೂಲ
ಪ್ಯಾರಿಸ್‌ಗೆ ಭೇಟಿ ನೀಡುವ ಭಾರತೀಯರಿಗೆ ಯುಪಿಐ ಮೂಲಕ ಪಾವತಿಸುವ‌ ವ್ಯವಸ್ಥೆ ಜಾರಿಗೆ ಬರುತ್ತದೆ ಎಂದು ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. ರಾಷ್ಟ್ರೀಯ ಪಾವತಿ ನಿಗಮ ಅಲ್ಲಿನ ಸರಕಾರದ ಜತೆಗೆ 2022ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಜೂನ್‌ 2023ರ ಪ್ರಕಾರ ಯುಪಿಐ ವಹಿವಾಟಿನ ಪ್ರಮಾಣವು 9.33 ಮಿಲಿಯನ್‌ನಷ್ಟಿದ್ದು, ಯುಪಿಐನ ಒಟ್ಟಾರೆ ವಹಿವಾಟಿನ ಮೌಲ್ಯವು 14.75 ಲಕ್ಷ ಕೋಟಿ ರೂ.ಗಳು. ವಿಶ್ವ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿರುವ ಯುಪಿಐನ ದೈನಂದಿನ ವಹಿವಾಟು ಮುಂದಿನ ಮೂರು ವರ್ಷಗಳಲ್ಲಿ ಒಂದು ಶತಕೋಟಿ ರೂ. ತಲುಪುವ ಸಾಧ್ಯತೆಯಿದೆ.

ಭಾರತ-ಇಂಡೋನೇಷ್ಯಾ ಮಾತುಕತೆ

ಯುಎಇಯೊಂದಿಗಿನ ಒಪ್ಪಂದದ ಬಳಿಕ ಇದೀಗ ಆಸಿಯಾನ್‌ ಪ್ರದೇಶದಲ್ಲಿನ ಭಾರತದ ಅತೀ ದೊಡ್ಡ ವ್ಯಾಪಾರ ಪಾಲುದಾರನಾದ ಇಂಡೋನೇಷ್ಯಾದೊಂದಿಗೆ ವ್ಯಾಪಾರ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಹಾಗೂ ಡಿಜಿಟಲ್‌ ಪಾವತಿಯ ದ್ವಿಪಕ್ಷೀಯ ಒಪ್ಪಂದದ ಮಾತುಕತೆ ನಡೆಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಇಂಡೋನೇಷ್ಯಾದ ಸಹವರ್ತಿ ಮುಲ್ಯಾನಿ ಇಂದ್ರವತಿಯಾಸ್‌ ನಡುವೆ ನಡೆದ ಮಾತುಕತೆಯಲ್ಲಿ ಈ ಅಂಶ ಪ್ರಸ್ತಾಪವಾಗಿದೆ.

ಈ ಬಗ್ಗೆ ಎರಡೂ ದೇಶಗಳು ಸೆಂಟ್ರಲ್‌ ಬ್ಯಾಂಕ್‌ನೊಂದಿಗೆ ಚರ್ಚಿಸಲಿವೆ. ಇದು ಸಾಧ್ಯವಾದರೆ ಭಾರತೀಯ ರಫ್ತುದಾರರು ತಮ್ಮ ವ್ಯಾಪಾರವನ್ನು ಇಂಡೋನೇಷ್ಯಾದ ರೂಪಾಯಿಯಲ್ಲಿ ನಡೆಸಬಹುದು. ಹಾಗೆಯೆ ತಾಳೆ ಎಣ್ಣೆಯನ್ನು ಭಾರತೀಯ ರೂಪಾಯಿಯಲ್ಲಿ ಪಡೆಯಬಹುದು. ಡಿಜಿಟಲ್‌ ಪಾವತಿಯಲ್ಲಿ ಪರಿಣತಿ ಹೊಂದಿರುವ ಭಾರತ ಇಂಡೋನೇಷ್ಯಾಕ್ಕೆ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೊಳಿಸುವಲ್ಲಿ ನೆರವು ಒದಗಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next