Advertisement

G-20 ಗಣ್ಯರಿಗೆ UPI ಮಂತ್ರದಂಡ ದರ್ಶನ

01:38 AM Sep 08, 2023 | Team Udayavani |

ಮಣಿಪಾಲ: ಹೊಸದಿಲ್ಲಿಯಲ್ಲಿ ಸೆ. 9ರಂದು ಆರಂಭವಾಗುವ ಜಿ 20 ಶೃಂಗ ಸಭೆಯ ಒಂದು ಸಾವಿರಕ್ಕೂ ಹೆಚ್ಚು ಮಂದಿ ಪ್ರತಿ ನಿಧಿಗಳ ಖಾತೆಗೆ ಕೇಂದ್ರ ಸರಕಾರ ಒಂದು ಸಾವಿರ ರೂ. ಕೊಡುಗೆ ನೀಡಲಿದೆ.

Advertisement

ಡಿಜಿಟಲ್‌ ಭಾರತದ ದರ್ಶನ
ಈ ಹಣವನ್ನು ಅವರು ಭಾರತದಲ್ಲಿ ಇರುವ ದಿನಗಳಲ್ಲಿ ತಿಂಡಿ ತಿನಿಸು ಖರೀದಿ, ತರಕಾರಿ ಖರೀದಿಯಿಂದ ತೊಡಗಿ ಯಾವುದೇ ವ್ಯವಹಾರಕ್ಕೆ ಬಳಸಿ ಡಿಜಿಟಲ್‌ ಪಾವತಿಯ ಸೊಗಸಾದ ಅನುಭವ ಪಡೆಯಬಹುದು. ಯುಪಿಐ ಶಕ್ತಿ ಪ್ರದರ್ಶನದ ಕೇಂದ್ರ ಸರಕಾರದ ಪ್ರಯತ್ನ ಭವಿಷ್ಯದ ದೃಷ್ಟಿಯಿಂದ “ಗೇಮ್‌ ಚೇಂಜರ್‌’ ಆಗಬಲ್ಲುದು.

ಹೊಸ ವ್ಯವಸ್ಥೆಗಳೇನು?
ಯುಪಿಐ ಎಟಿಎಂ
ಮಾತಿನ ಮೂಲಕ ಪಾವತಿ
ಯುಪಿಐ ಮೂಲಕ ಸಾಲ
ಟ್ಯಾಪ್‌ ಆ್ಯಂಡ್‌ ಪೇ

ವ್ಯವಹಾರ ಎಷ್ಟು ?
ಆಗಸ್ಟ್‌ ತಿಂಗಳಿನಲ್ಲಿ ಯುಪಿಐ ಮೂಲಕ 1 ಸಾವಿರ ಕೋಟಿಗಿಂತಲೂ ಹೆಚ್ಚು ವ್ಯವಹಾರಗಳು ನಡೆದಿದ್ದವು. ಅದರ ಮೊತ್ತ 15.76 ಲಕ್ಷ ಕೋ.ರೂ.ಗಳಿಗೂ ಅಧಿಕ.
ಆರ್‌ಬಿಐ ಮತ್ತು ಎನ್‌ಪಿಸಿಐ ಯುಪಿಐ ಮೂಲಕ ಪಾವತಿ ವ್ಯವಹಾರಗಳು 10 ಸಾವಿರ ಕೋಟಿಯ ಮೈಲಿಗಲ್ಲನ್ನು ದಾಟುವ ಗುರಿ ಹೊಂದಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next