Advertisement
ಇಂಟರ್ನೆಟ್‌ನ ಅಗತ್ಯವಿಲ್ಲದೇ ಕ್ಷಣ ಮಾತ್ರದಲ್ಲಿ ಹಣ ಪಾವತಿಸುವ “ಯುಪಿಐ 123 ಪೇ’ ಎಂಬ ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಮಂಗಳವಾರ ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ದೇಶದ 40 ಕೋಟಿ ಬೇಸಿಕ್ ಫೋನ್ ಬಳಕೆ ದಾರರಿಗೆ ನೆರವಾಗಲಿದೆ ಎಂದೂ ಅವರು ಹೇಳಿದ್ದಾರೆ. ಈವರೆಗೆ ಕೇವಲ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಯುಪಿಐ ಮೂಲಕ ಹಣವನ್ನು ಸ್ವೀಕರಿಸುವ ಮತ್ತು ಪಾವತಿ ಸುವ ಅವಕಾಶ ಲಭ್ಯವಿತ್ತು.
Related Articles
Advertisement
ಬಳಕೆ ಹೇಗೆ?ಬೇಸಿಕ್ ಫೋನ್ ಬಳಕೆದಾರರು ನಾಲ್ಕು ಪರ್ಯಾಯ ತಂತ್ರಜ್ಞಾನಗಳನ್ನು ಆಧರಿಸಿ ವಹಿವಾಟುಗಳನ್ನು ನಡೆಸಬಹುದು. ಅವೆಂದರೆ ಐವಿಆರ್(ಇಂಟರ್ಯಾಕ್ಟಿವ್ ವಾಯ್ಸ ರೆಸ್ಪಾನ್ಸ್) ಸಂಖ್ಯೆಗೆ ಕರೆ ಮಾಡುವ ಮೂಲಕ ಹಣ ಪಾವತಿಸುವುದು. ಹಣ ರವಾನೆ ಮಾಡಬೇಕೆಂದರೆ ಅದು ಯಾರಿಗೆ ತಲುಪಬೇಕೋ ಅವರ ಫೋನ್ ನಂಬರ್ ನಮೂದಿಸಿ, ಎಷ್ಟು ಮೊತ್ತ ಎಂದು ಬರೆದು, ಯುಪಿಐ ಪಿನ್ ಅನ್ನು ನಮೂದಿಸಬೇಕು. ಬೇಸಿಕ್ ಫೋನ್‌ಗಳಲ್ಲಿ ಆ್ಯಪ್‌ಗ್ಳನ್ನು ಬಳಸಿಕೊಂಡು ವ್ಯವಹರಿಸುವುದು: ಇದರಲ್ಲಿ “ಸ್ಕ್ಯಾನ್ ಮಾಡಿ ಪಾವತಿಸುವ ಆಯ್ಕೆ’ ಹೊರತುಪಡಿಸಿ ಉಳಿದೆಲ್ಲ ಯುಪಿಐ ಫೀಚರ್‌ಗಳೂ ಇರುತ್ತವೆ. ಮಿಸ್ಡ್ ಕಾಲ್ ಕೊಟ್ಟು ಸೇವೆ ಪಡೆಯು ವುದು: ಯಾವುದಾದರೂ ಮಳಿಗೆಗೆ ಹಣ ಪಾವತಿಸಬೇಕೆಂದಿದ್ದರೆ, ಆ ಮಳಿಗೆಯ ಹೊರಗೆ ಪ್ರಕಟಿಸಲಾದ ಸಂಖ್ಯೆಗೆ ನೀವು ಮಿಸ್ಡ್ ಕಾಲ್ ಕೊಡಬೇಕು. ತತ್‌ಕ್ಷಣ ಅತ್ತ ಕಡೆ ಯಿಂದ ಮರಳಿ ನಿಮಗೆ ಕರೆ ಬರುತ್ತದೆ. ಹಣ ಪಾವತಿಯ ಕುರಿತು ದೃಢೀಕರಣ ಕೇಳಲಾಗುತ್ತದೆ ಮತ್ತು ಯುಪಿಐ ಪಿನ್ ನಮೂದಿಸುವಂತೆ ಸೂಚಿಸಲಾಗುತ್ತದೆ. ಪಿನ್ ಹಾಕಿದೊಡನೆ ಹಣ ಪಾವತಿಯಾಗುತ್ತದೆ.ಧ್ವನಿ-ಆಧರಿತ ಪಾವತಿ. ಇಲ್ಲಿ ಧ್ವನಿಯ ತರಂಗಗಳ ಬಳಸಿ ಇತರರಿಗೆ ಸಂಪರ್ಕ ರಹಿತ ಪಾವತಿಯನ್ನು ಮಾಡಬಹುದು. ಯಾವುದಕ್ಕೆ ಬಳಸಬಹುದು?
ಈ ವ್ಯವಸ್ಥೆ ಮೂಲಕ ಯಾರಿಗೇ ಆದರೂ ಹಣ ರವಾನೆ ಮಾಡಬಹುದು, ನೀರು, ವಿದ್ಯುತ್ ಸೇರಿ ಇತರ ಬಿಲ್‌ಗಳ ಪಾವತಿ, ಫಾಸ್ಟ್‌ಟ್ಯಾಗ್ ರೀಚಾರ್ಜ್, ಮೊಬೈಲ್ ಬಿಲ್ ಪಾವತಿ ಮಾಡಬಹುದು. ಖಾತೆಯಲ್ಲಿರುವ ಬ್ಯಾಲೆನ್ಸ್ ಎಷ್ಟೆಂದು ನೋಡಬಹುದು. ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು, ಯುಪಿಐ ಪಿನ್‌ಗಳನ್ನು ಸೆಟ್ ಮಾಡುವುದು ಅಥವಾ ಬದಲಾಯಿಸುವ ಕೆಲಸವನ್ನೂ ಮಾಡಬಹುದು.