Advertisement
ಹೌದು, ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) “ಡೆಲಿಗೇಟೆಡ್ ಪೇಮೆಂಟ್ಸ್’ ಸೌಲಭ್ಯ ಪರಿಚಯಿಸಿದೆ. ಈ ಮೂಲಕ ಪ್ರಾಥಮಿಕ ಬಳಕೆ ದಾರರು ತಮ್ಮ ಖಾತೆಯ ಮೂಲಕವೇ ನಿಗದಿತ ಮೊತ್ತದವರೆಗೂ ದ್ವಿತೀಯ ಬಳಕೆದಾರರಿಗೆ ಯುಪಿಐ ವಹಿವಾಟು ನಡೆಸಲು ಅವಕಾಶವಿದೆ. ಈ ವ್ಯವಸ್ಥೆ ಯಲ್ಲಿ ದ್ವಿತೀಯ ಬಳಕೆದಾರರು ಯುಪಿಐ ಸಂಪರ್ಕಿತ ಖಾತೆ ಹೊಂದಿರ ಬೇಕಿಲ್ಲವೆಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್‌ದಾಸ್ ತಿಳಿಸಿದ್ದಾರೆ.ಗ್ರಾಮೀಣ ಭಾಗದ ಜನರು ಪ್ರತ್ಯೇಕ ಖಾತೆ ಹೊಂದಿರುವುದಿಲ್ಲ. ಕುಟುಂಬದ ಒಬ್ಬರ ಹೆಸರಲ್ಲಿ ಬ್ಯಾಂಕ್ ಖಾತೆ ಇರುತ್ತದೆ. ಹಾಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ತೆರಿಗೆ ಪಾವತಿ ಸಂಬಂಧ ಯುಪಿಐ ವಹಿವಾಟು ಮಿತಿಯನ್ನು ಈಗಿನ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ವರೆಗೆ ಹೆಚ್ಚಿಸಿರುವುದಾಗಿ ಆರ್‌ಬಿಐ ಹೇಳಿದೆ. ಇನ್ನು, ಸಾಮಾನ್ಯ ವಹಿವಾಟಿಗಿರುವ ಮಿತಿ(1 ಲಕ್ಷ ರೂ.) ಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ.