Advertisement

ಮೇಲ್ದರ್ಜೆಗೇರಿಸಲಾದ ಉತ್ತರ ರನ್‌ವೇ ಕಾರ್ಯಾರಂಭ

12:30 PM Mar 26, 2021 | Team Udayavani |

ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನವೀಕರಿಸಲಾದ ಮತ್ತು ಮೇಲ್ದರ್ಜೆಗೆ ಏರಿಸಲಾದ ಉತ್ತರ ರನ್‌ವೇ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.

Advertisement

ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶ ನಾಲಯದಿಂದ(ಡಿಜಿಸಿಎ) ಒಪ್ಪಿಗೆ ಪಡೆದು ಕೊಳ್ಳುವುದರೊಂದಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿ (ಕೆಐಎಬಿ/ ಬೆಂಗಳೂರು ವಿಮಾನ ನಿಲ್ದಾಣ)ನಲ್ಲಿ ನವೀಕರಿಸಲಾದ ಮತ್ತು ಮೇಲ್ದರ್ಜೆಗೇರಿಸಲಾದ ಉತ್ತರ ರನ್‌ವೇ ಇಂದಿನಿಂದ ಕಾರ್ಯಾರಂಭ ಮಾಡಿದೆ.

ಜೂನ್‌ 2020ರಿಂದ ಕಾರ್ಯಾಚರOಗಳೆ ‌ನ್ನು ನಿಲ್ಲಿಸಿದ್ದ ಉತ್ತರ ರನ್‌ವೇನ ನವೀಕರಣಕಾರ್ಯದಲ್ಲಿ ಮೇಲ್ಮೆ çಯನ್ನು ಹೊಸ ಆಸ್‌ಫಾಲ್ಟ್ ಪದರಗಳೊಂದಿಗೆ ದೃಢಪಡಿಸುವುದುಅಲ್ಲದೆ, ಎರಡು ನೂತನ ಟ್ಯಾಕ್ಸಿ ಮಾರ್ಗಗಳ ಸೇರ್ಪಡೆ ಸೇರಿದ್ದು, ಇದರಿಂದ ರನ್‌ವೇಕಾರ್ಯಾಚರಣೆ ಹೆಚ್ಚಿನ ಕಾರ್ಯಕ್ಷಮತೆ ಯೊಂದಿಗೆ ನಡೆಯಲು ಅವಕಾಶವಾಗುತ್ತದೆ. ಕ್ಯಾಟ್‌ ಒನ್‌ ಎಂಬ ವರ್ಗೀಕರಣವನ್ನು ಮುಂದುವರಿಸಲಿದೆ. ಆದರೆ, ಎಲ್‌ಇಡಿ ರನ್‌ವೇ ಸೆಂಟರ್‌ ಲೈನ್‌ ಲೈಟಿಂಗ್‌, ಇನ್‌ಸೆಟ್‌ ರನ್‌ವೇ ಎಡ್ಜ್ ಲೈಟ್ಸ್‌ಮತ್ತು ಟ್ಯಾಕ್ಸಿ ವೇ ಸೆಂಟರ್‌ಲೈನ್‌ ಲೈಟಿಂಗ್‌ಮತ್ತು ಎರಡು ಹೊಸ ಮಿಡ್‌ಪಾಯಿಂಟ್‌ ಟ್ರ್ಯಾನ್ಸ್‌ಮಿಸೊಮೀಟರ್‌ಗಳ ನೂತನ ಅಳವಡಿಕೆಯೊಂದಿಗೆ ರನ್‌ವೇಯನ್ನು ವಿತರಿಸಲಾಗಿದೆ. ಈ ಎಲ್ಲಾ ಸ್ಥಾಪನೆಗಳು ಇದೇ ವರ್ಷ ಕೆಲ ಸಮಯದಲ್ಲಿ ಕಾರ್ಯಾರಂಭ ಮಾಡಲಿವೆ. ದಕ್ಷಿಣ ರನ್‌ವೇ ಡಿಸೆಂಬರ್‌ 06,2019ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಈ ವಿಸ್ತರಣೆಗಳು ಬೆಂಗಳೂರು ವಿಮಾನನಿಲ್ದಾಣದಲ್ಲಿ ಕಡಿಮೆ ದೃಶ್ಯ ಸಾಧ್ಯತೆ ಇದ್ದರೂ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿದ್ದರೂ ಕಾರ್ಯಾಚರಣೆ ನಡೆಸುವ ಸಡಿಲತೆ ನೀಡಲಿವೆ.

ವಿಸ್ತರಿಸಲಾದ ಉಪಕರಣಸೌಲಭ್ಯಗಳಿಂದಾಗಿ ಉತ್ತರ ರನ್‌ವೇನಲ್ಲಿ ರನ್‌ವೇ ದೃಶ್ಯ ಸಾಧ್ಯತೆಯ ಶ್ರೇಣಿ(ಆರ್‌ವಿಆರ್‌)125 ಮೀಟರ್‌ಗಳು ಮತ್ತು ನೆಲದ ಮೇಲೆ 550 ಮೀಟರ್‌ಗಳಷ್ಟು ಆರ್‌ವಿಆರ್‌ ಗಳಲ್ಲಿವಿಮಾನ ಆಗಸಕ್ಕೆ ಹಾರಬಹುದಾದ ಅವಕಾಶಮಾಡಿಕೊಡುತ್ತವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುವಎರಡು ರನ್‌ವೇಗಳು ಕರ್ನಾಟಕ ಮತ್ತುಭಾರತದ ಬೆಳವಣಿಗೆಗೆ ಚಾಲನೆ ನೀಡುವುದಲ್ಲದೆ, ಹೆಚ್ಚುತ್ತಿರುವ ಬೇಡಿಕೆಯನ್ನುಪೂರೈಸಲು ಅಗತ್ಯ ಪ್ರೇರೇಪಣೆಯನ್ನು ನೀಡಲಿವೆ. ಬೆಂಗಳೂರು ವಿಮಾನ ನಿಲ್ದಾಣವನ್ನುಭಾರತದ ನೂತನ ಪ್ರವೇಶದ್ವಾರವಾಗಿಪರಿವರ್ತಿಸಲು ಬಿಐಎಎಲ್‌ ಹೊಂದಿರುವದೃಷ್ಟಿಕೋನವನ್ನು ಈ ಎರಡು ರನ್‌ವೇಗಳುಮತ್ತಷ್ಟು ವರ್ಧಿಸಲಿವೆ ಎಂದು ಬಿಐಎಎಲ್‌ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next