Advertisement

Harekala Newpadpu ಪದವಿ ಪೂರ್ವ ಕಾಲೇಜು ಮಂಜೂರು: ಪದ್ಮಶ್ರೀ ಅಕ್ಷರ ಸಂತ ಹಾಜಬ್ಬ ಕನಸು ನನಸು

11:24 PM Feb 04, 2024 | Team Udayavani |

ಉಳ್ಳಾಲ: ಅಕ್ಷರ ಸಂತ ಎಂದೇ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಮನವಿ ಮೇರೆಗೆ ನ್ಯೂಪಡ್ಪು ಸರಕಾರಿ ಪ್ರೌಢಶಾಲೆಯನ್ನು ಉನ್ನತೀಕರಿಸಿದ ಸರಕಾರಿ ಪದವಿಪೂರ್ವ ಕಾಲೇಜು ಆರಂಭಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಆದೇಶ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಪ.ಪೂ. ಕಾಲೇಜು ಸ್ಥಳೀಯ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.

Advertisement

ರ್ಯಾಪಾಲರ ಆದೇಶದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ ಶಿಕ್ಷಣ)ಯ ಅದೀನ ಕಾರ್ಯದರ್ಶಿ ಪದ್ಮನಿ ಎಸ್‌. ರಾವ್‌ ಹೊರಡಿಸಿರುವ ಆದೇಶ ಪತ್ರ ಹಾಜಬ್ಬ ಅವರ ಕೈ ಸೇರಿದೆ.

ಸರಕಾರಿ ಶಾಲೆಯ ಅಭಿವೃದ್ಧಿಗೆ ಹರೇಕಳದಂತಹ ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳ ಅಕ್ಷರದ ಕನಸು ನನಸು ಮಾಡುವ ನಿಟ್ಟಿನಲ್ಲಿ ಕಿತ್ತಳೆ ವ್ಯಾಪಾರ ಮಾಡುತ್ತಿದ್ದ ಹಾಜಬ್ಬ ಅವರ ಶ್ರಮಕ್ಕೆ ಹಲವಾರು ಪ್ರಶಸ್ತಿಗಳೊಂದಿಗೆ ದೇಶದ ಅತ್ಯನ್ನತ ಗೌರವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಪ್ರಥಮಿಕ ಶಾಲೆಯಾಗಿದ್ದ ನ್ಯೂಪಡಿ³ನಲ್ಲಿ ಪ್ರೌಢಶಿಕ್ಷಣ ಆರಂಭಿಸುವಲ್ಲಿ ಯಶಸ್ವಿಯಾಗಿದ್ದ ಹಾಜಬ್ಬ 2013ರಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next