Advertisement

ವೈದ್ಯಕೀಯ ಪಿಜಿ ಸೀಟುಗಳ ಸಂಖ್ಯೆ ಹೆಚ್ಚಳ: ಕೇಂದ್ರ ಸರ್ಕಾರ

10:40 PM Feb 12, 2023 | Team Udayavani |

ಗಾಂಧಿನಗರ: ಮುಂದಿನ ನಾಲ್ಕು ವರ್ಷಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಸಮಾನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಇದರಿಂದ ಎಲ್ಲಾ ಎಂಬಿಬಿಎಸ್‌ ಪದವೀಧರರು ಪಿಜಿ ಕೋರ್ಸ್‌ಗಳಿಗೆ ಸೇರಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಹೇಳಿದರು.

Advertisement

ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಭಾರತೀಯ ಮೂಲದ ವೈದ್ಯರ ಜಾಗತಿಕ ಸಂಘದ(ಜಿಎಪಿಐಒ) 13ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಸ್ಪತ್ರೆಗಳ ಸ್ಥಾಪನೆಗೆ ಹೂಡಿಕೆ ಮಾಡುವಂತೆ ಇದೇ ವೇಳೆ ಭಾರತೀಯ ಮೂಲದ ವೈದ್ಯರನ್ನು ಆಹ್ವಾನಿಸಿದರು.

“ನಾವು ಒಂದು ಆಸ್ಪತ್ರೆಯನ್ನು ಆರಂಭಿಸಿದರೆ ಅದಕ್ಕೆ ವೈದ್ಯರು ಕೂಡ ಅಗತ್ಯ. ಎಂಟು ವರ್ಷಗಳ ಹಿಂದೆ ದೇಶದಲ್ಲಿ 51,000 ಎಂಬಿಬಿಎಸ್‌ ಸೀಟುಗಳು ಇದ್ದವು. ಈಗ ಅದು 1,00,226ಕ್ಕೆ ಏರಿಕೆಯಾಗಿದೆ. ಅದೇ ರೀತಿ 34,000 ಇದ್ದ ವೈದ್ಯಕೀಯ ಪಿಜಿ ಸೀಟುಗಳ ಸಂಖ್ಯೆ ಇದೀಗ 64,000ಕ್ಕೆ ಏರಿಕೆಯಾಗಿದೆ,’ ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next