ಕನ್ನಡದ ವರನಟ ಡಾ.ರಾಜ್‌ಕುಮಾರ್ ತಮ್ಮ ಚಿತ್ರಗಳ ಮೂಲಕ ಚಿತ್ರರಂಗವನ್ನು ಸಂಪನ್ನವಾಗಿಸಿದವರು. ಇವತ್ತಿಗೂ ಅವರ ಸಿನಿಮಾಗಳು ಆದರ್ಶಮಯವಾಗಿವೆ. ಎಲ್ಲಾ ಬಗೆಯ ಚಿತ್ರಗಳಲ್ಲಿ ಕಾಣಿಸಿಕೊಂಡ ಖ್ಯಾತಿ ಕೂಡಾ ಡಾ.ರಾಜ್ ಅವರದ್ದು. ರಾಜ್ ನಂತರ ಅವರ ಪುತ್ರರು ನಟರಾಗಿ ತಮ್ಮದೇ ಆದಅಭಿಮಾನಿ ವರ್ಗವನ್ನು ಹೊಂದಿದ್ದಾರೆ.
ಈಗ ಅವರ ಮೊಮ್ಮಕ್ಕಳುಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊಮ್ಮಕ್ಕಳಾದ ವಿನಯ್, ಯುವ ರಾಜ್‌ಕುಮಾರ್, ಧೀರನ್ ಹಾಗೂ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಹೊಸ ವರ್ಷದ ವಿಶೇಷವೆಂದರೆ ವರ್ಷಪೂರ್ತಿ ರಾಜ್‌ಕುಟುಂಬದ ಒಂದಲ್ಲ, ಒಂದು ಸಿನಿಮಾಗಳು ತೆರೆಕಾಣುತ್ತಲೇ ಇರುತ್ತವೆ. ಸುಮಾರು 12ಕ್ಕೂ ಹೆಚ್ಚು ಚಿತ್ರಗಳು ರಾಜ್ ಕುಟುಂಬಂದಿಂದ ಬಿಡುಗಡೆಯಾಗಲಿವೆ.
ಈ ಮೂಲಕ ರಾಜ್ ಅಭಿಮಾನಿಗಳಿಗೆ ಅವರ ಕುಟುಂಬ ಸದಸ್ಯರ ವಿಭಿನ್ನ ಚಿತ್ರಗಳನ್ನು ನೋಡುವ ಅವಕಾಶ ಸಿಗಲಿದೆ. ಶಿವರಾಜ್ ಕುಮಾರ್,ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ವಿನಯ್, ಧೀರನ್,ಯುವ, ಧನ್ಯಾ ನಟಿಸಿರುವ ಚಿತ್ರಗಳು ಹೊಸ ವರ್ಷದಲ್ಲಿ ತೆರೆಕಾಣುತ್ತಿವೆ. ಆ ಚಿತ್ರಗಳ ಬಗ್ಗೆ ಒಂದು ರೌಂಡಪ್ ಇಲ್ಲಿದೆ.
ಇದನ್ನೂ ಓದಿ :ಪ್ರೇಮಿಗಳಿಗಾಗಿ ಪ್ರೇಮಂ ಪೂಜ್ಯಂ
ಹೊಸ ವರ್ಷಕ್ಕೆ ಶಿವಣ್ಣನಿಂದ ಎರಡು ಚಿತ್ರ : ಹೊಸ ವರ್ಷಕ್ಕೆ ಅಂದರೆ 2021ಕ್ಕೆ ಶಿವರಾಜ್ ಕುಮಾರ್ ನಟನೆಯ ಎರಡು ಸಿನಿಮಾವಂತೂ ರಿಲೀಸ್ ಆಗಲಿದೆ. “ಭಜರಂಗಿ-2′ ಹಾಗೂ ಇತ್ತೀಚೆಗಷ್ಟೇ ಸೆಟ್ಟೇರಿರುವ “ಶಿವಪ್ಪ’ ಚಿತ್ರಗಳು 2021ಕ್ಕೆ ತೆರೆಕಾಣಲಿದೆ. ಈಗಾಗಲೇ “ಭಜರಂಗಿ-2′ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.
ಬಿಡುಗಡೆಯಾಗಿರುವ ಟೀಸರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಶಿವರಾಜ್ ಕುಮಾರ್ ಅವರ ಗೆಟಪ್ ಕೂಡಾ ಭಿನ್ನವಾಗಿದೆ. ಈಗಾಗಲೇನಿರ್ದೇಶಕ ಹರ್ಷ ಜೊತೆ ಶಿವರಾಜ್‌ಕುಮಾರ್ “ಭಜರಂಗಿ’ ಹಾಗೂ “ವಜ್ರಕಾಯ’ ಚಿತ್ರಗಳನ್ನು ಮಾಡಿದ್ದಾರೆ. ಈಗ “ಭಜರಂಗಿ-2′ ಬರುತ್ತಿದ್ದು, ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ. ಇನ್ನು, ಈಗಾಗಲೇ ಚಿತ್ರೀಕರಣ ಆರಂಭಿಸಿರುವ “ಶಿವಪ್ಪ’ ಚಿತ್ರ ಕೂಡಾ ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಮಾರ್ಚ್, ಏಪ್ರಿಲ್ ವೇಳೆಗೆ ತೆರೆಗೆ ಬರಲಿದೆ.
ಯುವರತ್ನ, ಜೇಮ್ಸ್ ಮೂಲಕ ಪುನೀತ್ ಎಂಟ್ರಿ : ಪುನೀತ್ ರಾಜ್ ಕುಮಾರ್ ಅವರಎರಡು ಚಿತ್ರಗಳು ಹೊಸ ವರ್ಷಕ್ಕೆ ತೆರೆಕಾಣಲಿವೆ. ಈಗಾಗಲೇಚಿತ್ರೀಕರಣ ಮುಗಿಸಿರುವ “ಯುವರತ್ನ’ ಹೊಸ ವರ್ಷದ ಆರಂಭದಲ್ಲಿ ತೆರೆಗೆ ಬಂದರೆ, ಸದ್ಯ ಚಿತ್ರೀಕರಣದಲ್ಲಿರುವ “ಜೇಮ್ಸ್’ಕೂಡಾ 2021 ಕ್ಕೆ ತೆರೆಗೆ ಬರಲಿದೆ. ಇದರ ಜೊತೆಗೆ ಪುನೀತ್ ನಿರ್ಮಾಣದ ಚಿತ್ರವೂ ಹೊಸ ವರ್ಷದಲ್ಲೇ ಬಿಡುಗಡೆಯಾಗಲಿದೆ.
ರಾಘಣ್ಣ ಕೈಯಲ್ಲಿ ರಾಜತಂತ್ರ, ಆಡಿಸಿದಾತ : ಹೊಸ ವರ್ಷಕ್ಕೆ ರಾಘವೇಂದ್ರ ರಾಜ್ ಕುಮಾರ್ ನಟಿಸಿರುವ ಎರಡು ಚಿತ್ರಗಳು ಬಿಡುಗಡೆಯಾಗಲಿವೆ. “ರಾಜತಂತ್ರ’ ಹಾಗೂ “ಆಡಿಸಿದಾತ’ ಚಿತ್ರಗಳಲ್ಲಿ ರಾಘವೇಂದ್ರರಾಜ್‌ಕುಮಾರ್ ನಟಿಸಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ. ಈ ಚಿತ್ರಗಳು ಕೂಡಾ ಹೊಸ ವರ್ಷಕ್ಕೆ ತೆರೆಗೆ ಬರಲಿವೆ. “ಅಮ್ಮನ ಮನೆ’ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿರುವ ರಾಘಣ್ಣ, ಈಗ ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ನಟಿಸುತ್ತಿದ್ದಾರೆ.
ವಿನಯ್ ಕೈಯಲ್ಲಿ ಟೆನ್, ಗ್ರಾಮಾಯಣ : ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ಈಗಾಗಲೇ ಚಿತ್ರರಂಗಕ್ಕೆ ನಾಯಕರಾಗಿ ಎಂಟ್ರಿಕೊಟ್ಟಿರೋದು ನಿಮಗೆ ಗೊತ್ತೇ ಇದೆ. ಹೊಸ ವರ್ಷದಲ್ಲಿ ವಿನಯ್ ನಟಿಸಿರುವ ಎರಡುಚಿತ್ರಗಳು ತೆರೆಗೆ ಬರಲಿವೆ. ಅದರಲ್ಲಿ “ಟೆನ್’ ಹಾಗೂ “ಗ್ರಾಮಾಯಣ’ ಚಿತ್ರಗಳು ಸೇರಿವೆ. ಈಗಾಗಲೇ ಈ ಎರಡೂ ಚಿತ್ರಗಳ ಚಿತ್ರೀಕರಣ ಸಂಪೂರ್ಣಗೊಂಡಿದೆ. ಪುಷ್ಕರ್ ಬ್ಯಾನರ್‌ನಲ್ಲಿ ತಯಾರಾಗಿರುವ ಈ ಚಿತ್ರವನ್ನುಕರಮ್ ಚಾವ್ಲಾ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿನಯ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.
ಯುವ ರಣಧೀರ ಕಂಠೀರವ ಮೂಲಕಯುವ ತೆರೆಗೆ : ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಕೂಡಾ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ಅದು “ಯುವ ರಣಧೀರ ಕಂಠೀರವ’ ಚಿತ್ರದ ಮೂಲಕ. ಇತ್ತೀಚೆಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಪರಭಾಷಾ ಸ್ಟಾರ್ಸ್ ಕೂಡ ಟೀಸರ್‌ಗೆ ಮೆಚ್ಚುಗ ವ್ಯಕ್ತಪಡಿಸಿದ್ದಾರೆ. ಈ ಚಿತ ಕೂಡಾ ಹೊಸ ವರ್ಷದಲ್ಲಿ ತೆರೆಕಾಣಲಿದೆ.
ಶಿವ 143 ಮೇಲೆ ಧೀರೇನ್ ಕನಸು : ರಾಜ್‌ಕುಟುಂಬದ ಮತ್ತೂಂದು ಧೀರೇನ್ ಕೂಡಾ ಹೊಸ ವರ್ಷದಲ್ಲಿ ತೆರೆಮೇಲೆ ರಾರಾಜಿಸಲಿದ್ದಾರೆ. ಡಾ.ರಾಜ್ ಪುತ್ರಿ ಪೂರ್ಣಿಮಾ ರಾಮ್ ಕುಮಾರ್ ಪುತ್ರನಾಗಿರುವ ಧೀರೇನ್ “ಶಿವ 143′ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಜಯಣ್ಣ ನಿರ್ಮಿಸಿದ್ದಾರೆ. ಅನಿಲ್ ಈ ಚಿತ್ರದ ನಿರ್ದೇಶಕರು. ಈ ಚಿತ್ರದಲ್ಲಿ ಧೀರೇನ್ ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿಯಾಗಿ ಧನ್ಯಾ ಎಂಟ್ರಿ : ಡಾ.ರಾಜ್‌ಕುಟುಂಬದಿಂದ ಸಾಕಷ್ಟು ಮಂದಿ ಹೀರೋಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಈಗ ನಾಯಕಿಯ ಎಂಟ್ರಿಯಾಗುತ್ತಿದೆ. ಅವರು ಧನ್ಯಾ ರಾಮ್ ಕುಮಾರ್. “ನಿನ್ನ ಸನಿಹಕೆ’ ಎಂಬ ಚಿತ್ರದಲ್ಲಿ ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಕೂಡಾ ಹೊಸ ವರ್ಷದಲ್ಲಿ ತೆರೆಗೆ ಬರಲಿದೆ.
-ರವಿಪ್ರಕಾಶ್ ರೈ