ಭಾರತೀಯ ಮಾರುಕಟ್ಟೆಯಲ್ಲಿ ರನೌಲ್ಟ್ ಡಸ್ಟರ್, ರನೌಲ್ಟ್ ಕ್ವಿಡ್ ಮತ್ತು ರನೌಲ್ಟ್ ಟ್ರೈಬರ್ ಮೂಲಕ ತನ್ನದೇ ಆದ ಛಾಪು ಮೂಡಿಸಿರುವ ರನೌಲ್ಟ್ ಕಂಪನಿ, ಹೊಸ ಕಾರೊಂದನ್ನು ಮಾರುಕಟ್ಟೆಗೆಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಹ್ಯಾಚ್ ಬ್ಯಾಕ್ ಸೆಗ್ಮೆಂಟ್ ನಲ್ಲಿ ಕ್ವಿಡ್, ಸೆವೆನ್ ಸೀಟರ್ ನಲ್ಲಿ ಟ್ರೈಬರ್ ಮತ್ತು ಎಸುವಿಯಲ್ಲಿ ಡಸ್ಟರ್ ಕಾರುಗಳನ್ನು ಹೊಂದಿರುವ ರನೌಲ್ಟ್, ಈಗ ಮತ್ತೂಂದು ಎಸ್‌ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಸಂಬಂಧ ನ.18ರಂದು ತನ್ನ ಹೊಸ ಕಾರಿನ ಹೆಸರು ಮತ್ತು ಕಾರಿನ ಕಾನ್ಸೆಪ್ಟ್ ಅನ್ನು ಬಿಡುಗಡೆ ಮಾಡಿದೆ. ಎಲ್ಲವೂ ಅಂದುಕೊಂಡಂತೆಯೇ ಆದರೆ, 2021ರ ಆರಂಭದಲ್ಲೇ ಈ ಕಾರು ಮಾರುಕಟ್ಟೆಗೆ ಬರಲಿದೆ. ಈ ಕಾರನ್ನು ಭಾರತೀಯ ಗ್ರಾಹಕರ ಪ್ರತಿಕ್ರಿಯೆಯನ್ನು ಆಧರಿಸಿ ಫ್ರಾನ್ಸ್ ಮತ್ತು ಭಾರತದ ಡಿಸೈನರ್‌ಗಳ ತಂಡ ರೂಪಿಸಿದೆ.
ಭಾರತದಲ್ಲಿ ಮೊದಲು… : ಕಾರಿನ ಕಾನ್ಸೆಪ್ಟ್ ಬಿಡುಗಡೆ ಮಾಡಿದ ರನೌಲ್ಟ್ ಇಂಡಿಯಾದ ಸಿಇಒ ಮತ್ತು ಎಂಡಿ ವೆಂಕಟ್ರಾಮ್ ಮಾಮಿಲ್ಲಪಿಳ್ಳೆ, ಮುಂದಿನ ವರ್ಷ ಭಾರತದಲ್ಲೇ ಗ್ಲೋಬಲ್ ಲಾಂಚ್ ಮಾಡಲಿದ್ದೇವೆ. ಬಳಿಕ ಬೇರೆ ಬೇರೆ ದೇಶಗಳ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ. ವಿಶೇಷವೆಂದರೆ, ಕ್ವಿಡ್ ಮತ್ತು ಟ್ರೈಬರ್ ಕಾರುಗಳನ್ನೂ ಭಾರತದಲ್ಲೇ ಮೊದಲಿಗೆ ಬಿಡುಗಡೆ ಮಾಡಿ, ಬಳಿಕ ಬೇರೆ ದೇಶಗಳಲ್ಲಿ ಲಾಂಚ್ ಮಾಡಲಾಗಿತ್ತು. ಈ ಕಾರು ಮಾರುತಿ ವಿಟಾರಾ ಬ್ರೀಜಾ, ಹುಂಡೈ ವೆನ್ಯೂ, ಮಹೀಂದ್ರಾ ಎಕ್ಸ್ ಯು ವಿ 300 ಹಾಗೂ ಹೊಸದಾಗಿ ಲಾಂಚ್ ಮಾಡಲಾಗಿರುವ ಕಿಯಾದ ಸೋನೆಟ್ ಮತ್ತು ಟೊಯೋಟಾದ ಅರ್ಬನ್‌ಕ ಯ್ಯೂಸರ್, ಇನ್ನೇನು ಬಿಡುಗಡೆಯಾಗಬೇಕಿರುವ ನಿಸಾನ್ ಕಂಪನಿಯ ಮ್ಯಾಗ್ನೆಟ್‌ಗೆ ಸ್ಪರ್ಧೆ ನೀಡಲಿದೆ. ಈ ಕಾರಿನಲ್ಲಿ ಎರಡು ಹಂತದ ಫುಲ್ ಎಲ್‌ಇಡಿ ಹೆಡ್ ಲ್ಯಾಂಪ್ಸ್ , ನಿಯೋನ್ ಇಂಡಿಕೇಟರ್ ಲೈಟ್ಸ್, ಸಿ ಶೇಪ್ ವುಳ್ಳ ಟೈ ಲೈಟ್ಸ್ ಗಳನ್ನು ಶೋಕಾರ್ ನಲ್ಲಿ ನೋಡಬಹುದಾಗಿದೆ.
ಆ್ಯಪಲ್‌ಕಾರ್ ಪ್ಲೇ… :
ಕಂಪನಿ ಹೇಳಿಕೆಯ ಪ್ರಕಾರ, ಗ್ರೌಂಡ್ ಕ್ಲಿಯೆರೆನ್ಸ್ 210 ಎಂಎಂ ಇರಲಿದೆ.19 ಇಂಚ್ ವೀಲ್, ರೂಫ್ ರೈಲ್ಸ್ ಮತ್ತು ಫ್ರಂಟ್ ಆ್ಯಂಡ್ ರಿಯರ್ ನಲ್ಲಿ ಸ್ಕಿಡ್ ಪ್ಲೇಟ್‌ಗಳನ್ನು ಒಳಗೊಂಡಿದೆ. ಅಲ್ಲದೆ, ಇದು ಸಿಎಂಎಫ್‌ಎ+ ಫ್ಲಾಟ್ ಫಾರ್ಮ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ, ದೊಡ್ಡ ಸೈಜಿನ ಇನ್ಫೋಟೈನ್ ಮೆಂಟ್, ಆ್ಯಪಲ್ ಕಾರ್ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ ಸಪೋರ್ಟ್ ಆಗಲಿದೆ. ವೈರ್‌ಲೆಸ್ ಚಾರ್ಜಿಂಗ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ವ್ಯವಸ್ಥೆಯೂ ಇರಲಿದೆ.
-ಸೋಮಶೇಖರ ಸಿ.ಜೆ.