ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮಹಿಳೆಯೊಬ್ಬಳು ಮದುವೆಯಾದ 18 ತಿಂಗಳ ನಂತರ ಪತಿಯಿಂದ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೇ ಡೈವೋರ್ಸ್ ನ ಕಾರಣ ಕೇಳಿ ಸಂಭಾಲ್ ನ ಷರಿಯಾ ನ್ಯಾಯಾಲಯದ ಗೊಂದಲಕ್ಕೀಡಾಗಿದೆ.
ಹೌದು ! ನನ್ನ ಪತಿ ತುಂಬಾ ಪ್ರೀತಿಸುತ್ತಾನೆ ಮತ್ತು ನನ್ನೊಂದಿಗೆ ಜಗಳವಾಡುವುದಿಲ್ಲ ಎಂಬ ಕಾರಣ ನೀಡಿ ಮಹಿಳೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
ನನ್ನ ಗಂಡ “ಅತಿಯಾಗಿ” ಪ್ರೀತಿಸುತ್ತಾನೆ. ಇದು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಕಳೆದ 18 ತಿಂಗಳುಗಳಲ್ಲಿ ನಾನು ಎಂದಿಗೂ ಗಂಡನೊಂದಿಗೆ ಜಗಳವಾಡಲಿಲ್ಲ, ಇದು ಬೇಸರದ ವಿಚಾರ ಎಂದು ಮಹಿಳೆ ಹೇಳಿದ್ದಾರೆ.
ಮನೆ ಕೆಲಸಗಳನ್ನು ಅಡುಗೆ ಮಾಡಲು ತನ್ನ ಪತಿ ಕೂಡ ಸಹಾಯ ಮಾಡುತ್ತಾರೆ. ಆತ ಒಮ್ಮೆಯೂ ನನ್ನ ಮೇಲೆ ಕೂಗಲಿಲ್ಲ ಅಥವಾ ಯಾವುದೇ ವಿಷಯದ ಬಗ್ಗೆ ಅವನು ನನ್ನನ್ನು ನಿರಾಶೆಗೊಳಿಸಲಿಲ್ಲ. ಅಂತಹ ವಾತಾವರಣ ನನಗೆ ಉಸಿರುಗಟ್ಟಿಸುತ್ತಿದೆ. ನಾನು ತಪ್ಪು ಮಾಡಿದಾಗಲೆಲ್ಲಾ ಅವನು ನನ್ನನ್ನು ಕ್ಷಮಿಸುತ್ತಾನೆ. ಆದರೇ ನಾನು ಅವನೊಂದಿಗೆ ವಾದಿಸಲು ಬಯಸುತ್ತೇನೆ ಎಂದು ಮಹಿಳೆ ಹೇಳಿದ್ದಾಳೆಂದು ವರದಿ ತಿಳಿಸಿದೆ.
ಆಕೆಯ ವಿಚ್ಛೇಧನದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ಇದೊಂದು ಕ್ಷುಲ್ಲಕ ಕಾರಣ. ಬೇರೆ ಕಾರಣ ನೀಡಿ ಎಂದು ತಿಳಿಸಿದೆ. ಇದಾದ ನಂತರ ಆಕೆ ಸ್ಥಳೀಯ ಪಂಚಾಯತ್ ಈ ವಿಷಯವನ್ನು ಆಲಿಸಿದರೂ ತೀರ್ಪು ನೀಡಲು ನಿರಾಕರಿಸಿತು.
ಆಕೆಯ ಪತಿ ಕೂಡ ಪ್ರಕರಣವನ್ನು ಹಿಂಪಡೆಯಲು ಹೆಂಡತಿಯ ಮನವೊಲಿಸುವಂತೆ ಷರಿಯಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.