Advertisement

ಲವರ್‌ ಜತೆ ಸೇರಿ ಪತಿಯ ಕೊಲೆ: ಪತ್ನಿ ಮತ್ತಿಬ್ಬರು ಅರೆಸ್ಟ್‌

09:12 AM May 21, 2019 | Sathish malya |

ಮುಜಫ‌ರನಗರ : ಜಿಲ್ಲೆಯ ಖೇದಿ ಕೇಮ್‌ರೂ ಗ್ರಾಮದಲ್ಲಿ ಪತಿಯನ್ನು ಹೊಡೆದು ಕೊಂದ ಪತ್ನಿಯನ್ನು ಪೊಲೀಸರು ಆಕೆಯ ಲವರ್‌ ಮತ್ತು ಇತರಿಬ್ಬರ ಸಹಿತ ಬಂಧಿಸಿದ್ದಾರೆ.

Advertisement

ಕಳೆದ ಮೇ 15ರಂದು ಹರೀಶ್‌ ಅಲಿಯಾಸ್‌ ಸೋನು (31) ಅವರ ಮೃತ ದೇಹ ಗಟಾರದಲ್ಲಿ ಪತ್ತೆಯಾಗಿತ್ತು.

ಹರೀಶ್‌ ಅವರ ತಾಯಿ ಕೊಟ್ಟ ದೂರಿನ ಪ್ರಕಾರ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿವಮ್‌ ಮತ್ತು ಇನ್ನೋರ್ವ ಸಂಬಂಧಿ ಯನ್ನು ಬಂಧಿಸಿದರು. ಹರೀಶ್‌ ಅವರ ಪತ್ನಿ ಶಿವಾನಿ ಅವರನ್ನು ಕೂಡ  ದೂರಿನಲ್ಲಿ ಕೊಲೆ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

ತನಿಖೆಯಲ್ಲಿ ತಿಳಿದು ಬಂದ ಪ್ರಕಾರ ಶಿವಾನಿಗೆ ಶಿಬ್ಬು ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು; ಇದಕ್ಕೆ ಪತಿ ಹರೀಶ್‌ ವಿರೋಧಿಸಿದ್ದ. ಈ ಹಿನ್ನೆಲೆಯಲ್ಲಿ ಹರೀಶ್‌ ನ ಪತ್ನಿ ಶಿವಾನಿ ತನ್ನ ಲವರ್‌ ಮತ್ತು ಇನ್ನಿಬ್ಬರ ಜತೆಗೆ ಸೇರಿ ಆತನನ್ನು ಕೊಂದರು ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next