Advertisement

ಉ.ಪ್ರ. ಇಂದು ಮೊದಲ ಹಂತ: 839 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

03:45 AM Feb 11, 2017 | |

ಲಕ್ನೋ: ಉತ್ತರ ಪ್ರದೇಶದಲ್ಲಿ ಶನಿವಾರದಿಂದ ಮತದಾನ ಆರಂಭವಾಗಲಿದೆ. ಒಟ್ಟು ಏಳು ಹಂತಗಳ ಪೈಕಿ ಇದು ಮೊದಲನೇಯದ್ದು. ಪಶ್ಚಿಮ ಉತ್ತರ ಪ್ರದೇಶದ 73 ಕ್ಷೇತ್ರಗಳಲ್ಲಿನ 839 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Advertisement

ಬಿಜೆಪಿ, ಬಿಎಸ್ಪಿ, ಕಾಂಗ್ರೆಸ್‌ ಮೈತ್ರಿ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ನೋಯ್ಡಾ ಕ್ಷೇತ್ರದಿಂದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಪುತ್ರ ಪಂಕಜ್‌ ಸಿಂಗ್‌, ಮಥುರಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುಖಂಡ ಪ್ರದೀಪ್‌ ಮಾಥೂರ್‌, ತಾನಾಭವನ್‌ನಿಂದ ಬಿಜೆಪಿಯ ವಿವಾದಿತ ಶಾಸಕ ಸುರೇಶ್‌ ರಾಣಾ ಮುಖ್ಯವಾಗಿ ಕಣದಲ್ಲಿದ್ದಾರೆ. 

ಮೋದಿ ಲೇವಡಿ: ಉ.ಪ್ರ.ದ ಬಿಜ್ನೋರ್‌ನಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ರ್ಯಾಲಿ ನಡೆಸಿ, ಎಸ್ಪಿ-ಕಾಂಗ್ರೆಸ್‌ ಮೈತ್ರಿ ವಿರುದ್ಧ ಹರಿಹಾಯ್ದಿದ್ದಾರೆ. ಉತ್ತರಪ್ರದೇಶ ಮತ್ತು ಇಡೀ ದೇಶವನ್ನು ಲೂಟಿ ಮಾಡಿದ ಎರಡು ಕುಟುಂಬಗಳನ್ನು ಸೋಲಿಸಿ ಎಂದು ಕರೆ ನೀಡಿದ್ದಾರೆ. “ಗೂಗಲ್‌ನಲ್ಲಿ ಹುಡುಕಾಡಿದರೆ ರಾಹುಲ್‌ ಬಗ್ಗೆ ಇರುವಷ್ಟು ಜೋಕ್‌ಗಳು ಬೇರೆ ಯಾವ ನಾಯಕನ ಬಗ್ಗೆಯೂ ಇಲ್ಲ’ ಎಂದಿದ್ದಾರೆ.

ರೇಪಿಸ್ಟ್‌ಗಳಿಗೆ ಉಪ್ಪು ಸವರಿ: ಉಮಾ
ಉತ್ತರ ಪ್ರದೇಶದ ಬುಲಾಂದ್‌ ಶಹರ್‌ನಲ್ಲಿ ನಡೆದ ಗ್ಯಾಂಗ್‌ರೇಪ್‌ ಅಪರಾಧಿಗಳನ್ನು ಬಂಧಿಸಲು ವಿಫ‌ಲವಾದ ಎಸ್ಪಿ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಉಮಾಭಾರತಿ ಗುಡುಗಿದ್ದಾರೆ. “ಯಾರು ಬಲತ್ಕಾರದಂಥ ದುಷ್ಕೃತ್ಯ ಎಸಗುತ್ತಾರೋ, ಅಂಥವರನ್ನು ಉಲ್ಟಾ ನೇತು ಹಾಕಬೇಕು. ಚರ್ಮ ಸುಲಿಯುವ ತನಕ ಅವರನ್ನು ಥಳಿಸಬೇಕು. ರಕ್ತ ಸೋರುತ್ತಿರುವ ಆ ಗಾಯಕ್ಕೆ ಉಪ್ಪು ಮತ್ತು ಖಾರದ ಪುಡಿಯನ್ನು ಸವರಬೇಕು’ ಎಂದು ಅವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next