ಉತ್ತರ ಪ್ರದೇಶ: ಶಾಲಾ ವಿದ್ಯಾರ್ಥಿಗಳಿಂದ ಉರ್ದು ಪ್ರಾರ್ಥನೆ ಪಠಿಸಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿಯ ಶಾಲೆಯೊಂದರಲ್ಲಿ ಉರ್ದು ಪ್ರಾರ್ಥನೆಗೆ ಅವಕಾಶ ನೀಡಿದ ಆರೋಪದ ಮೇಲೆ ಶಿಕ್ಷಕನನ್ನು ವಜಾಗೊಳಿಸಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ವಜೀರುದ್ದೀನ್ ಎನ್ನುವ ಶಿಕ್ಷಕ ಶಾಲಾ ಮಕ್ಕಳಿಗೆ ಮದ್ರಾಸ ಮಾದರಿಯ ಉರ್ದು ಪ್ರಾರ್ಥನೆಯಾದ ‘ಲಬ್ ಪೆ ಆತಿ ಹೈ ದುವಾ ಬನ್ಕೆ ತಮನ್ನಾ ಮೇರಿ’ ಹಾಡಿಸಿದ್ದಾರೆ. ಇದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಶಿಕ್ಷಕನ ವಿರುದ್ಧ ವಿಶ್ವ ಹಿಂದೂ ಪರಿಷದ್ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ವಾಜಪೇಯಿ ಜನ್ಮದಿನಕ್ಕೆ ʼಮೇ ಅಟಲ್ ಹೂʼ ಸಿನಿಮಾದ ಫಸ್ಟ್ ಲುಕ್ ರಿಲೀಸ್; ಮಾಜಿ ಪ್ರಧಾನಿ ಪಾತ್ರದಲ್ಲಿ ಪಂಕಜ್ ತ್ರಿಪಾಠಿ
ಈ ಘಟನೆ ಫರೀದ್ ಪುರ್ ನ ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ನಡೆದಿದ್ದು, ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯ ನಹಿದ್ ಸಿದ್ದಿಕಿ ಅವರನ್ನು ಅಮಾನತುಗೊಳಿಸಲಾಗಿತ್ತು. ಈಗ ಶಿಕ್ಷಕ ವಜೀರುದ್ದೀನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದಲ್ಲದೆ ಶಿಕ್ಷಕ ಮಕ್ಕಳನ್ನು ಮತಾಂತರಗೊಳಿಸಲು ಯತ್ನಿಸುತ್ತಿದ್ದ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ.
‘ಲಬ್ ಪೆ ಆತಿ ಹೈ ದುವಾ ಬನ್ಕೆ ತಮನ್ನಾ ಮೇರಿ’ ಗೀತೆಯನ್ನು ಉರ್ದುವಿನ ಖ್ಯಾತ ಕವಿ ಅಲ್ಲಮ ಇಕ್ಬಾಲ್ ಅವರು ಬರೆದಿದ್ದು, ‘ಸಾರೆ ಜಹಾನ್ ಸೇ ಅಚ್ಚಾ, ಹಿಂದೂಸ್ತಾನ್ ಹಮಾರಾʼ ಗೀತೆ ಇವರ ಮತ್ತೊಂದು ಪ್ರಸಿದ್ಧ ಗೀತೆ.