Advertisement

ಯೋಗಿ ಹೇರ್‌ಕಟ್‌ ಕಡ್ಡಾಯ!

01:56 AM Apr 29, 2017 | Karthik A |

ಹೊಸದಿಲ್ಲಿ: ಅಚ್ಚರಿಯ ಆದೇಶವೆಂಬಂತೆ, ಉತ್ತರಪ್ರದೇಶದ ಮೀರತ್‌ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್‌ರಂತೆ ಕೂದಲು ಕತ್ತರಿಸಿಕೊಳ್ಳಲು ಸೂಚಿಸಲಾಗಿದೆ. ಈ ಆದೇಶ ಪಾಲಿಸದ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶ ನಿರಾಕರಿಸಲಾಗಿದೆ.

Advertisement

ಇಲ್ಲಿಯ ರಿಷಬ್‌ ಅಕಾಡೆಮಿ ಆಫ್ ಕೋ-ಎಜುಕೇಶನ್‌ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ನಲ್ಲಿ ಈ ನಿಯಮ ಜಾರಿ ಮಾಡಲಾಗಿದೆ. ಯೋಗಿಯಂತೆ ಹೇರ್‌ಕಟ್‌ ಮಾಡಿಸುವುದಷ್ಟೇ ಅಲ್ಲ, ಗಡ್ಡವನ್ನು ಸಂಪೂರ್ಣ ಬೋಳಿಸಬೇಕು, ಶಾಲೆಗೆ ಮಾಂಸಾಹಾರ ತರಬಾರದು. ಲವ್‌ ಜಿಹಾದ್‌ ತಡೆಯುವ ಸಲುವಾಗಿ ಬಾಲಕ ಮತ್ತು ಬಾಲಕಿಯರು ಪ್ರತ್ಯೇಕವಾಗಿ ಕುಳಿತುಕೊಳ್ಳಬೇಕು ಎಂದೂ ಸೂಚಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಗುರುವಾರ ತಾವು ಯೋಗಿಯಂತೆ ಕೂದಲು ವಿನ್ಯಾಸ ಮಾಡಿಕೊಳ್ಳದ ಕಾರಣ, ನಮಗೆ ಶಾಲೆಯ ಆವರಣದೊಳಗೆ ಪ್ರವೇಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಬಳಿಕವೇ ಈ ವಿಷಯ ಬೆಳಕಿಗೆ ಬಂದಿದೆ. 

ಆದರೆ ಶಾಲೆಯ ಆಡಳಿತ ಮಂಡಳಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ತರಲು ಅವರಿಗೆ ಯೋಗಿ ರೀತಿ ಕೂದಲು ಕತ್ತರಿಸಲು ಹೇಳಿದ್ದೇವೆ. ನಮ್ಮದು ಜೈನ್‌ ಮಾಲಕತ್ವದ ಶಾಲೆ. ಆದ್ದರಿಂದ ಮಾಂಸಾಹಾರ ನಿಷೇಧಿಸಿದ್ದೇವೆ. ಇನ್ನು ದಾಡಿ ಬಿಟ್ಟುಕೊಂಡು ಬಂದು ನಮಾಜ್‌ ಮಾಡಲು ಇದು ಮದರಸಾವಲ್ಲ. ಹಾಗಾಗಿ ಗಡ್ಡ ಬಿಡಬಾರದೆಂದು ಆದೇಶಿಸಿದ್ದೇವೆ ಎಂದಿದೆ. ವಿದ್ಯಾರ್ಥಿನಿಯರ ಸುರಕ್ಷತಾ ದೃಷ್ಟಿಯಿಂದ ಅವರನ್ನು ಎಲ್ಲಾ ಚಟುವಟಿಕೆಗಳಿಂದ ಪ್ರತ್ಯೇಕಿಸಲಾಗಿದೆ. ಮುಸ್ಲಿಂ ಹುಡುಗರು ಹಿಂದೂ ಹುಡುಗಿಯರ ಗೆಳೆತನ ಬೆಳೆಸಿ, ಲವ್‌ ಜೆಹಾದ್‌ ಖೆಡ್ಡಾಕ್ಕೆ ತಳ್ಳುತ್ತಾರೆ. ಅದನ್ನು ತಡೆಯಲು ಹೀಗೆ ಮಾಡಲಾಗಿದೆ ಎಂದೂ ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next