ಲಕ್ನೋ: ಮದುವೆಯ ಮೊದಲ ರಾತ್ರಿ ನವವಧು ಪತಿ ಮುಂದೆ ಇಟ್ಟ ಬೇಡಿಕೆ ಗಂಡಿನ ಕಡೆಯವರ ನಿದ್ದೆಗೆಡಿಸಿದೆ. ಉತ್ತರಪ್ರದೇಶದ ಸಹರಾನ್ಪುರದಲ್ಲಿ ವಧು ತಮ್ಮ ಮೊದಲ ರಾತ್ರಿಯ ದಿನ ಪತಿಯಿಂದ ತನಗೆ ಏನೆಲ್ಲ ಬೇಕು ಎಂದು ಕೇಳಿರುವ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮದುವೆ ಮೊದಲ ರಾತ್ರಿ ಸಂಪ್ರದಾಯದಂತೆ ‘ಮುಹ್ ದಿಖೈ’ (ಮುಖ ತೋರಿಸುವ ಸಂಪ್ರದಾಯ) ಆಚರಣೆ ನಡೆದಿದೆ. ಈ ವೇಳೆ ವಧು ತನ್ನ ಪತಿಯ ಬಳಿ ತನಗೆ ಏನೆಲ್ಲ ಬೇಕು ಎನ್ನುವುದನ್ನು ಕೇಳಿದ್ದಾಳೆ. ಮೊದಲು ವಧು ತನಗೆ ಬಿಯರ್ ತಂದುಕೊಡಿ ಎಂದು ಕೇಳಿದ್ದಾಳೆ. ಇದಕ್ಕೆ ಪತಿ ಪತ್ನಿಗೆ ಬಿಯರ್ ತಂದು ಕೊಟ್ಟಿದ್ದಾನೆ.
ಇದಾದ ಬಳಿಕ ವಧು ಗಾಂಜಾ ಹಾಗೂ ಮಟಾನ್ ತಂದುಕೊಡಿ ಎಂದು ಮತ್ತಷ್ಟು ಬೇಡಿಕೆ ಇಟ್ಟಿದ್ದಾಳೆ. ಇದನ್ನು ಕೇಳಿ ಪತಿಗೆ ಶಾಕ್ ಆಗಿದೆ. ಈ ವಿಚಾರವನ್ನು ಗಂಡು ತಮ್ಮ ಮನೆಯವರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
ವಧುವಿನ ಈ ವರ್ತನೆಯನ್ನು ಇಷ್ಟಪಡದ ಗಂಡಿನ ಕಡೆಯವರು ಈ ವಿಚಾರವನ್ನು ಪೊಲೀಸ್ ಠಾಣೆಗೆ ಮುಟ್ಟಿಸಿದ್ದಾರೆ. ಪೊಲೀಸ್ ಠಾಣೆಗೆ ಎರಡೂ ಕುಟುಂಬದವರು ಬಂದು ಮಾತುಕತೆ ನಡೆದಿದೆ.
ಠಾಣೆಯಲ್ಲಿ ಗಂಡಿನ ಕಡೆಯವರು ವಧು ಹೆಣ್ಣಲ್ಲ ಈಕೆ ತೃತೀಯ ಲಿಂಗಿ ಎಂದು ಆರೋಪಿಸಿದ್ದಾರೆ. ಆದರೆ ಎರಡೂ ಕಡೆಯವರು ಮನೆಯ ವಿಚಾರವನ್ನು ಮನೆಯಲ್ಲೇ ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಠಾಣೆಯಿಂದ ದೂರು ದಾಖಲಿಸದೆ ವಾಪಾಸ್ ಆಗಿದ್ದಾರೆ ಎಂದು ವರದಿಯಾಗಿದೆ.