Advertisement

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ‍್ಯಾಲಿ’ಗೆ ಅನುಮತಿ ನಿರಾಕಾರ

04:19 PM Jun 02, 2023 | Team Udayavani |

ಲಕ್ನೋ : ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಜೂನ್ 5 ರಂದು ಇಲ್ಲಿ ರ‍್ಯಾಲಿ ನಡೆಸಲು ಅಯೋಧ್ಯೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಸಿಂಗ್ ಅವರು ಮಹಿಳಾ ಗ್ರಾಪ್ಲರ್‌ಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ನಡೆಸುತ್ತಿರುವ ಹೋರಾಟ ದೇಶಾದ್ಯಂತ ತೀವ್ರತೆಯನ್ನು ಪಡೆದುಕೊಂಡಿದೆ.

Advertisement

ಇದನ್ನೂ ಓದಿ: Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

ಜೂನ್ 5 ರಂದು ವಿಶ್ವ ಪರಿಸರ ದಿನದಂದು ನಿಗದಿಪಡಿಸಲಾದ ಇತರ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಸಿಂಗ್ ಪರವಾಗಿ ಬಿಜೆಪಿ ಕೌನ್ಸಿಲರ್ ಚಮೇಲಾ ದೇವಿ ಅವರು ಕೋರಿದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಅಯೋಧ್ಯೆ ಎಸ್‌ಪಿ ಗೌತಮ್ ಹೇಳಿದ್ದಾರೆ.

ತನ್ನ ವಿರುದ್ಧದ ಕುಸ್ತಿಪಟುಗಳ ಆರೋಪದ ಕುರಿತು ನಡೆಯುತ್ತಿರುವ ಪೊಲೀಸ್ ತನಿಖೆಯಿಂದಾಗಿ ರಾಮ್ ಕಥಾ ಪಾರ್ಕ್‌ನಲ್ಲಿ ನಡೆಯುವ ‘ಜನ್ ಚೇತನ ಮಹಾರ‍್ಯಾಲಿ ‘ಯನ್ನು ಕೆಲವು ದಿನಗಳವರೆಗೆ ಮುಂದೂಡಿರುವುದಾಗಿ ಸಿಂಗ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ವಿನೇಶ್ ಫೋಗಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಪ್ರಮುಖ ಕುಸ್ತಿಪಟುಗಳು ಸಿಂಗ್ ಲೈಂಗಿಕ ಶೋಷಣೆಯ ಆರೋಪವನ್ನು ಮಾಡಿ ಎಪ್ರಿಲ್ 23 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next