ಹೊಸದಿಲ್ಲಿ : ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 58ರ ಖಾಲಿ ಪ್ರದೇಶದಲ್ಲಿ ಪ್ರಾರ್ಥನೆ ನಡೆಸುವುದಕ್ಕೆ ತಮ್ಮ ನೌಕರರಿಗೆ ಬಿಡಕೂಡದು ಎಂದು ಉತ್ತರ ಪ್ರದೇಶ ಪೊಲೀಸರು ಬಹು ರಾಷ್ಟ್ರೀಯ ಕಂಪೆನಿಗಳಿಗೆ ಮತ್ತು ಕೈಗಾರಿಕಾ ಘಟಕಗಳಿಗೆ ಆದೇಶ ಹೊರಡಿಸಿರುವುದನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಖಂಡಿಸಿದ್ದಾರೆ.
ಯಾರಿಗೂ ತೊಂದರೆ, ಅಡಚಣೆ ಉಂಟಾಗದ ಖಾಲಿ ಸಾರ್ವಜನಿಕ ಸ್ಥಳದಲ್ಲಿ ನಮಾಜು ಸಲ್ಲಿಸಿದರೆ ಅದರಿಂದ ಶಾಂತಿ, ನಮ್ಮದೆ, ಸಾಮರಸ್ಯಕ್ಕೆ ಧಕ್ಕೆ ಆಗುವುದು ಹೇಗೆ ? ಎಂದು ಓವೈಸಿ ಪ್ರಶ್ನಿಸಿದ್ದಾರೆ.
ನೋಯ್ಡಾದ ಸೆಕ್ಟರ್ 58ರ ಸಾರ್ವಜನಿಕ ಖಾಲಿ ಸ್ಥಳದಲ್ಲಿ ನಮಾಜು ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ, ಅಡಚಣೆ ಉಂಟಾಗುತ್ತದೆ ಎಂದು ಪೊಲೀಸರು ಬಹು ರಾಷ್ಟ್ರೀಯ ಕಂಪೆನಿಗಳಿಗೆ ಮತ್ತು ಕೈಗಾರಿಕಾ ಘಟಕಗಳಿಗೆ ನೊಟೀಸ್ ಜಾರಿ ಮಾಡಿ ತಮ್ಮ ಉದ್ಯೋಗಿಗಳಿಗೆ ಅಲ್ಲಿ ಪ್ರಾರ್ಥನೆ ನಡೆಸುವುದನ್ನು ನಿರ್ಬಂಧಿಸಬೇಕು ಎಂದು ಉತ್ತರ ಪ್ರದೇಶ ಪೊಲೀಸರು ನೊಟೀಸು ಜಾರಿ ಮಾಡಿದ್ದರು.
ಒಟ್ಟಿನಲ್ಲಿ ಮುಸಲ್ಮಾನರಿಗೆ ನೀವು ಏನೇ ಮಾಡಿದರೂ ತಪ್ಪು ನಿಮ್ಮದೇ ಎಂಬ ಸಂದೇಶ ಈ ಆದೇಶದಲ್ಲಿ ಅಡಕವಾಗಿರುವಂತಿದೆ. ಇಲ್ಲದಿದ್ದರೆ ಉದ್ಯೋಗಿಗಳು ತಮ್ಮ ವೈಯಕ್ತಿಕ ನೆಲೆಯಲ್ಲಿ ಸಲ್ಲಿಸುವ ಪ್ರಾರ್ಥನೆಗೆ ಬಹು ರಾಷ್ಟ್ರೀಯ ಕಂಪೆನಿಗಳನ್ನು ಹೊಣೆಗಾರರನ್ನಾಗಿ ಮಾಡುವುದು ಎಷ್ಟು ಸರಿ? ಎಂದು ಓವೈಸಿ ಪ್ರಶ್ನಿಸಿದ್ದಾರೆ.