ಲಕ್ನೋ : ಉತ್ತರ ಪ್ರದೇಶದ ಶಾಸಕ ಮತ್ತು ಗ್ಯಾಂಗ್‌ಸ್ಟರ್ ಆಗಿರುವ ಮುಖ್‌ತಾರ್ ಅನ್ಸಾರಿ ಅವರಿಗೆ ಇಂದು ಮಂಗಳವಾರ ಹೃದಯಾಘಾತವಾದ ಕಾರಣ ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು.
ಅನ್ಸಾರಿ ಅವರಿಗೆ ಹೃದಯಾಘಾತವಾದಾಗ ಅವರು ಉತ್ತರ ಪ್ರದೇಶದ ಬಂಡಾ ಜಿಲ್ಲೆಯ ಜೈಲಿನಲ್ಲಿ ಇದ್ದರು.
ಅನ್ಸಾರಿ ಅವರ ಪತ್ನಿ, ಪತಿಯನ್ನು ಕಾಣಲೆಂದು ಬಂಡಾ ಜಿಲ್ಲಾ ಬಂಧೀಖಾನೆಗೆ ತೆರಳಿದ್ದರು. ಆ ಸಂದರ್ಭದಲ್ಲೇ ಅನ್ಸಾರಿ ಅವರಿಗೆ ಹೃದಯಾಘಾತವಾಯಿತು ಎಂದು ವರದಿಗಳು ತಿಳಿಸಿವೆ.
ಒಡನೆಯೇ ಅನ್ಸಾರಿ ಮತ್ತು ಅವರ ಪತ್ನಿಯನ್ನು ಆಸ್ಪತ್ರೆಗೆ ಒಯ್ಯಲಾಯಿತು. ಅನ್ಸಾರಿ ಅವರ ದೇಹಾರೋಗ್ಯ ಗಂಭೀರವಿದೆ ಎನ್ನಲಾಗಿದೆ.
ಮುಖ್‌ತಾರ್ ಅನ್ಸಾರಿ ಅವರು 2015ರಿಂದ ವಿವಿಧ ಕ್ರಿಮಿನಲ್ ಸೆಕ್ಷನ್‌ಗಳಡಿ ಜೈಲಿನಲ್ಲಿ ಇದ್ದಾರೆ.