Advertisement

ಉತ್ತರಪ್ರದೇಶ: ಮಾವಿನ ಹಣ್ಣಿಗಾಗಿ ಪದೇ, ಪದೇ ಪೀಡಿಸಿದ 5 ವರ್ಷದ ಮಗುವನ್ನೇ ಹತ್ಯೆಗೈದ…

05:11 PM Jul 23, 2022 | Team Udayavani |

ಲಕ್ನೋ: ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಪದೇ, ಪದೇ ಮಾವಿನ ಹಣ್ಣು ಕೊಡು ಎಂದು ಕೇಳಿದ 5 ವರ್ಷದ ಮಗು(ಸೊಸೆ)ವನ್ನು 33 ವರ್ಷದ ವ್ಯಕ್ತಿಯೊಬ್ಬ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಖೇಡಾ ಕುರ್ತಾನ್ ಶಾಮ್ಲಿ ಗ್ರಾಮದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ: ತಕ್ಷಣವೇ ಐದು ಲಕ್ಷ ರೂ ಪರಿಹಾರ ವಿತರಣೆ

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, 5 ವರ್ಷದ ಮಗು (ಸೊಸೆ) ಮಾವಿನ ಕೊಡು ಎಂದು ಕಿರಿಕಿರಿ ಮಾಡಿದ್ದಕ್ಕೆ ಆಕ್ರೋಶಗೊಂಡು ಕಬ್ಬಿಣದ ಸರಳಿನಿಂದ ಆಕೆಯ ತಲೆಯ ಮೇಲೆ ಹೊಡೆದು, ಗಂಟಲು ಸೀಳಿ ಹಾಕಿದ್ದ. ನಂತರ ಮಗುವಿನ ಶವವನ್ನು ಗೋಣಿ ಚೀಲದೊಳಗೆ ಹಾಕಿಟ್ಟಿರುವುದಾಗಿ ತಿಳಿಸಿದೆ.

ಸಂತ್ರಸ್ತೆಯನ್ನು ಕೂಲಿ ಕಾರ್ಮಿಕನ ಮಗಳಾದ ಖೈರು ನಿಶಾ ಎಂದು ಗುರುತಿಸಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆಂದು ತಿಳಿದು, ಆಕೆಯ ಹುಡುಕಾಟದಲ್ಲಿದ್ದರು. ಈ ಸಂದರ್ಭದಲ್ಲಿ ಆರೋಪಿ ಕೂಡಾ ಆಕೆಯನ್ನು ಹುಡುಕಾಡುವ ನೆಪದಲ್ಲಿ ಗ್ರಾಮಸ್ಥರ ಜತೆ ಸೇರಿಕೊಂಡಿದ್ದ ಎಂದು ಪೊಲೀಸ್ ಠಾಣಾಧಿಕಾರಿ ಶ್ಯಾಮ್ ವೀರ್ ಸಿಂಗ್ ತಿಳಿಸಿದ್ದಾರೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿಕೊಂಡಿದ್ದರು. ತನಿಖೆಯ ವೇಳೆ ಬಾಲಕಿಯ ಶವ ಆರೋಪಿ ಉಮ್ರಾದ್ದೀನ್ ಮನೆಯಲ್ಲಿ ಪತ್ತೆಯಾಗಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next