Advertisement

 Bizarre: ಮಲವಿಸರ್ಜನೆ ವೇಳೆ ಖಾಸಗಿ ಅಂಗದ ಮೂಲಕ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದ ವ್ಯಕ್ತಿ

02:45 PM Apr 08, 2023 | Team Udayavani |

ಲಕ್ನೋ: ಖಾಸಗಿ ಅಂಗದ ಮೂಲಕ ತನ್ನ ದೇಹದೊಳಗೆ ಹಾವು ಪ್ರವೇಶಿಸಿದೆ ಎಂದು ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿ ವೈದ್ಯರನ್ನೇ ಬೆಚ್ಚಿ ಬೀಳಿಸಿದ ಘಟನೆ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿನ ನಡೆದಿದೆ.

Advertisement

ಮಹೇಂದ್ರ ಎಂಬ ವ್ಯಕ್ತಿ ಹರ್ದೋಯಿ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಹೊಟ್ಟೆ ನೋವೆಂದು ಮದ್ಯರಾತ್ರಿ ಬಂದಿದ್ದಾನೆ. ಈ ವೇಳೆ ವೈದ್ಯರು ಏನಾಯಿತು ಹೇಗೆ ಹೊಟ್ಟೆ ನೋವೆಂದು ಕೇಳಿದಾ ತಾನು ಮಲವಿಸರ್ಜನೆ ಮಾಡುವ ವೇಳೆಯಲ್ಲಿ ತನ್ನ ಖಾಸಗಿ ಅಂಗದ ಮೂಲಕ ಹಾವು ದೇಹದೊಳಗೆ ಪ್ರವೇಶ ಮಾಡಿದೆ ಎಂದಿದ್ದಾನೆ.

ಇದನ್ನೂ ಓದಿ: ಸುಧಾಮೂರ್ತಿಗೆ ಪದ್ಮಭೂಷಣ: ಸಂತಸ ವ್ಯಕ್ತಪಡಿಸಿದ ಬ್ರಿಟನ್​ ಪ್ರಧಾನಿ Rishi Sunak

ಕೂಡಲೇ ವೈದ್ಯರು ಶಾಕ್‌ ಆಗಿ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಅವರಿಗೆ ಹಾವಿನ ಕುರುಹು ಆಗಲಿ, ಅದರ ಕಡಿತದ ಕುರುಹು ಆಗಲಿ ಪತ್ತೆಯಾಗಿಲ್ಲ. ಆದರೆ ಈ ಮಾತನ್ನು ಮಹೇಂದ್ರರ ಕುಟುಂಬದವರು ಕೇಳದೇ ಮತ್ತೊಮ್ಮೆ ಪರೀಕ್ಷೆ ಮಾಡಿಸಲು ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲೂ ಕೂಡ ಇದೇ ರೀತಿಯ ಮಾತನ್ನು ವೈದ್ಯರು ಹೇಳಿದ್ದಾರೆ.

ಪರೀಕ್ಷೆ ಮಾಡಿದ ಬಳಿಕ ʼಈ ವ್ಯಕ್ತಿಗೆ ವಿಪರೀತ ಡ್ರಗ್ಸ್‌ ಸೇವಿಸಿದ ಪರಿಣಾಮ ಹೊಟ್ಟೆ ನೋವಾಗಿದೆ. ಡ್ರಗ್ಸ್‌ ನ ಅಮಲಿನಲ್ಲೇ ಮನೆಯವರ ಬಳಿ ವ್ಯಕ್ತಿ ಹಾವಿನ ವಿಚಾರವನ್ನು ಹೇಳಿದ್ದಾನೆ. ಸಿಟಿ ಸ್ಕ್ಯಾನ್‌ ಮಾಡಿದ ಬಳಿಕ ಇದು ಡ್ರಗ್ಸ್‌ ನ ಪ್ರಭಾವವೆಂದು ತಿಳಿದು ಬಂದಿದೆ. ಆತನನ್ನು ಡಿಸ್ಚಾರ್ಜ್‌ ಮಾಡಲಾಗಿದೆ ಎಂದು ಡಾ. ಶೇರ್ ಸಿಂಗ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next