Advertisement

ಕೋವಿಡ್ ರಣಕೇಕೆ : ಮಾಸ್ಕ್ ಹಾಕದೇ 10,000 ದಂಡ ಕಟ್ಟಿದ ವ್ಯಕ್ತಿ!

01:44 PM Apr 20, 2021 | Team Udayavani |

ನವದೆಹಲಿ : ದೇಶಾದ್ಯಂತ ಕೋವಿಡ್ ಅಟ್ಟಹಾಸ ಮೆರೆಯುತ್ತಿರುವ ಕಾರಣ ಎಲ್ಲಾ ರಾಜ್ಯಗಳು ಈ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿವೆ. ದೆಹಲಿ ಸರ್ಕಾರ  ಒಂದು ಹೆಜ್ಜೆ ಮುಂದೆ ಹೋಗಿ ಯಾರು ಮಾಸ್ಕ್ ಧರಿಸಿಲ್ಲವೋ ಅವರಿಗೆ ಮೊದಲು ಎಚ್ಚರಿಗೆ ನೀಡಿ 1000 ದಂಡ ಹಾಕುತ್ತಿದೆ. ಅದೇ ವ್ಯಕ್ತಿ ಮತ್ತೂ ಮಾಸ್ಕ್ ಧರಸದೇ ಹೋದರೆ ಅಂತವರಿಗೆ 10,000 ದಂಡ ಹಾಕಲಾಗುತ್ತಿದೆ. ಇಂತಹದ್ದೇ ಒಂದು ಪ್ರಕರಣ ಇದೀಗ ದೆಹಲಿಯಲ್ಲಿ ಕಂಡು ಬಂದಿದೆ. ವ್ಯಕ್ತಿಯೊಬ್ಬ ಮಾಸ್ಕ್ ಹಾಕದೆ 10,000 ದಂಡ ಕಟ್ಟಿದ್ದಾನೆ.

Advertisement

ದೆಹಲಿಯ ಡಿಯೋರಿಯಾ ಪ್ರದೇಶದ ಅಮರ್ಜಿತ್ ಯಾದವ್ ಎಂಬ ವ್ಯಕ್ತಿ ಮಾಸ್ಕ್ ಧರಿಸದೇ ಡಿಯೋರಿಯಾ ವೃತ್ತದಲ್ಲಿ ಏಪ್ರಿಲ್ 18 ರಂದು ಓಡಾದಿದ್ದಾರೆ. ಇದನ್ನು ಕಂಡ ಪೊಲೀಸರು ಅಮರ್ಜಿತ್ ಅವರಿಗೆ 1000 ದಂಡ ವಿಧಿಸಿದ್ದಾರೆ. ಇಷ್ಟಾದರೂ ಕೂಡ ಎಚ್ಚೆತ್ತುಕೊಳ್ಳದ ಈ ವ್ಯಕ್ತಿ ಮತ್ತೆ ಮಾಸ್ಕ್ ಹಾಕದೇ ಏಪ್ರಿಲ್ 19ರಂದೂ ಕೂಡ ಓಡಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು 10,000 ದಂಡ ವಿಧಿಸಿ ರಸೀದಿ ನೀಡಿದ್ದಾರೆ. ಈ ಬಗ್ಗೆ ಸ್ಟೇಷನ್ ಹೌಸ್ ಅಧಿಕಾರಿ ಟಿ.ಜೆ ಸಿಂಗ್ ಮಾಹಿತಿ ನೀಡಿದ್ದಾರೆ.

ದೆಹಲಿ ರಾಜ್ಯಾದ್ಯಂತ ಕೋವಿಡ್ -19 ಪ್ರಕರಣಗಳಲ್ಲಿ ಹಠಾತ್ ಏರಿಕೆಯಾಗಿದ್ದು, ಸೋಮವಾರ(ಏಪ್ರಿಲ್ 18) 390 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ  ಸುರಕ್ಷತಾ ಪ್ರೋಟೋಕಾಲ್ಗಳನ್ನು ಜಾರಿಗೆ ತರಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಡಿಯೋರಿಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀಪತಿ ಮಿಶ್ರಾ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next