ಲಕ್ನೋ : ಉತ್ತರ ಪ್ರದೇಶದ ಫೈಜಾಬಾದ್‌ಗೆ ಆಯೋಧ್ಯೆ ಎಂದು ನಾಮಕರಣದ ಕೆಲವೇ ದಿನಗಳ ತರುವಾಯ ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆ ಜಿಲ್ಲೆಯಲ್ಲಿ ಮಾಂಸ, ಮದ್ಯ ಮಾರಾಟದ ಮೇಲೇ ನಿಷೇಧ ಹೇರುವ ಚಿಂತನೆ ನಡೆಸುತ್ತಿದ್ದಾರೆ.
ಅಯೋಧ್ಯೆಯ ಸಾಧು ಸಂತರು ಜಿಲ್ಲೆಯಲ್ಲಿ ಮಾಂಸ, ಮಧ್ಯ ಮಾರಾಟವನ್ನು ನಿಷೇಧಿಸಬೇಕೆಂದು ಸಿಎಂ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ.
ಅಯೋಧ್ಯೆಯಲ್ಲಿನ ಸಾಧು ಸಂತರ ಈ ಆಗ್ರಹದ ಬಗ್ಗೆ ಸರಕಾರಕ್ಕೆ ಅರಿವಿದೆ; ಅಂತೆಯೇ ಈ ಪ್ರಸ್ತಾವವನ್ನು ಪರಿಗಣಿಸುವ ದಿಶೆಯಲ್ಲಿ ಚಿಂತನೆ ನಡೆಯುತ್ತಿದೆ ಎಂದು ಯುಪಿ ಸರಕಾರದ ವಕ್ತಾರ ಶ್ರೀಕಾಂತ್ ಶರ್ಮಾ ಹೇಳಿದ್ದಾರೆ.
ಕಾನೂನು ಚೌಕಟ್ಟಿನಲ್ಲೇ ಅಯೋಧ್ಯೆ ಜಿಲ್ಲೆಯಲ್ಲಿ ಮದ್ಯ ಮಾಂಸ ಮಾರಾಟವನ್ನು ನಿಷೇಧಿಸಲಾಗುವುದು ಎಂದು ಶರ್ಮಾ ಹೇಳಿದರು.
“ಅಯೋಧ್ಯೆಯು ಪವಿತ್ರ ಜಿಲ್ಲೆಯಾಗಿದೆ. ನಗರದಲ್ಲಿ ಈ ಹಿಂದೆಂದೂ ಮಾಂಸ ಮದ್ಯ ಮಾರಾಟ ನಡೆಯುತ್ತಿರಲಿಲ್ಲ. ಇವುಗಳ ಮೇಲೆ ಅಧಿಕೃತ ನಿಷೇಧ ಹೇರಿದರೆ ಜಿಲ್ಲೆಯ ಜನಜೀವನ ಆರೋಗ್ಯಕರವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ.