Advertisement

ಬೀಡಾಡಿ ಗೋವುಗಳ ಸಾಕಲು ಹೆಚ್ಚುವರಿ ಸೆಸ್‌

12:30 AM Jan 03, 2019 | Team Udayavani |

ಲಕ್ನೋ: ಬೀಡಾಡಿ ಗೋವುಗಳ ಉಪಟಳದಿಂದ ಉತ್ತರ ಪ್ರದೇಶದ ಜನತೆಯನ್ನು ಕಾಪಾಡಲು ಅಲ್ಲಿನ ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದೆಲ್ಲೆಡೆ ಸರ್ಕಾರಿ ಗೋ ಶಾಲೆಗಳನ್ನು ಕಟ್ಟಿ ಅಲ್ಲಿ ಬೀಡಾಡಿ ಗೋವುಗಳನ್ನು ಸಲಹಲು ತೀರ್ಮಾನಿಸಲಾಗಿದೆ. ಆದರೆ, ಗೋಶಾಲೆಗಳ ಖರ್ಚಿನ ಹೊರೆಯನ್ನು ಜನತೆ ಮೇಲೆ ಹೊರಿಸಲಾಗಿದ್ದು, ಹೆಚ್ಚುವರಿ “ಗೋವು ಕಲ್ಯಾಣ ಸೆಸ್‌’ ವಿಧಿಸಲು ನಿರ್ಧರಿಸಿದೆ.

Advertisement

ಅಬಕಾರಿ ಸುಂಕದಲ್ಲಿ ಶೇ.0.5ರಷ್ಟು ಸುಂಕ, ಹೆದ್ದಾರಿಗಳಲ್ಲಿನ ಸರ್ಕಾರಿ ನಿರ್ಮಿತ ಟೋಲ್‌ಗ‌ಳಲ್ಲಿ ಈಗಿರುವ ಸೆಸ್‌ ಅನ್ನು ಶೇ.0.5ರಿಂದ ಶೇ.1ಕ್ಕೆ ಹೆಚ್ಚಿಸಲು ಹಾಗೂ ಪಶು ಸಂಗೋಪನೆಗಾಗಿ ಮಂಡಿ ಪರಿಷದ್‌ಗಳ ಆದಾಯದ ಮೇಲೆ ಈವರೆಗೆ ವಿಧಿಸಲಾಗುತ್ತಿದ್ದ ಶೇ.1ರಷ್ಟು ಸುಂಕವನ್ನು ಶೇ. 2ಕ್ಕೆ ಹೆಚ್ಚಿಸಲು ತೀರ್ಮಾನಿಸ ಲಾಗಿದೆ. ಸರ್ಕಾರದ ಈ ನಡೆಯನ್ನು   ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಖಂಡಿಸಿವೆ. ಇನ್ನೊಂ ದೆಡೆ, ಅಲಿಗಡದಲ್ಲಿ ಸರ್ಕಾರದ ಸೂಚನೆಯಂತೆ ಪೊಲೀಸ್‌ ಠಾಣೆಗಳಲ್ಲೇ ಬೀಡಾಡಿ ದನಗಳಿಗೆ ಸದ್ಯಕ್ಕೆ ಆಶ್ರಯ ನೀಡಲಾಗುತ್ತಿದೆ ಎಂದು ಪೊಲೀಸ್‌ ಮುಖ್ಯಸ್ಥರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next