Advertisement

ಅಯೋಧ್ಯೆ: ಪ್ರಧಾನಿ ನರೇಂದ್ರ ಮೋದಿಗೆ ಕರ್ನಾಟಕದ ಕೋದಂಡರಾಮ ಪ್ರತಿಮೆ ಅರ್ಪಣೆ

05:48 PM Aug 05, 2020 | Nagendra Trasi |

ಲಕ್ನೋ/ಮಣಿಪಾಲ: ಉತ್ತರಪ್ರದೇಶದ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಲಕ್ಷಾಂತರ ದೇಶದ ರಾಮಭಕ್ತರ ಆಶಯದಂತೆ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಆಗಸ್ಟ್ 05-2020) ಭೂಮಿ ಪೂಜೆ ನೆರವೇರಿಸಿ ಶಿಲಾನ್ಯಾಸಗೈದಿದ್ದರು. ಬಳಿಕ ನಡೆದಿದ್ದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಕೋದಂಡರಾಮ ಪ್ರತಿಮೆಯನ್ನು ನೀಡಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೌರವಿಸಿದ್ದರು.

Advertisement

ಕರ್ನಾಟಕ ಸರ್ಕಾರ ನೀಡಿದ್ದ ಕೋದಂಡರಾಮ ಪ್ರತಿಮೆಯನ್ನು ನೀಡಿ ಗೌರವಿಸಲಾಗಿತ್ತು. ಈ ಮೂರ್ತಿ ಸುಮಾರು ಒಂದೂವರೆ ಅಡಿ ಎತ್ತರವಾಗಿದೆ. ಕೋದಂಡರಾಮ ಪ್ರತಿಮೆಯನ್ನು ಬೆಂಗಳೂರಿನ ಶಿಲ್ಪಿ ರಾಮಮೂರ್ತಿ ಎಂಬವರು ಕೆತ್ತಿದ್ದರು.

ಉತ್ತರಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕರ್ನಾಟಕ ಸರ್ಕಾರ ಈ ಕೋದಂಡ ರಾಮ ಪ್ರತಿಮೆಯನ್ನು ತಯಾರಿಸಲು ರಾಮಮೂರ್ತಿ ಅವರಿಗೆ ತಿಳಿಸಿತ್ತು. ಟಿಕ್ ವುಡ್ ನಲ್ಲಿ ಕೆತ್ತಲ್ಪಟ್ಟಿದ್ದ ಈ ಕೋದಂಡರಾಮ ಪ್ರತಿಮೆಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಲಾಗಿತ್ತು.


ನಾಗದೇವನಹಳ್ಳಿಯ ಕೆಂಗೇರಿ ನಿವಾಸಿ ರಾಮಮೂರ್ತಿ ಈ ಪ್ರತಿಮೆಯನ್ನು ತಯಾರಿಸಿದ್ದು, ಮೂರ್ತಿ ತಯಾರಿಸಲು ತನಗೆ ಅವಕಾಶ ಸಿಕ್ಕಿದ್ದು ಮರೆಯಲಾರದ ಸಂಗತಿಯಾಗಿದೆ ಎಂದು ರಾಮಮೂರ್ತಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next