ಉತ್ತರ ಪ್ರದೇಶ: ಮನಸ್ಸು ಹಾಗೂ ಆಸಕ್ತಿಯಿದ್ದರೆ ಏನನ್ನು ಬೇಕಾದರೂ ಮಾಡಬಹುದು. ಅದಕ್ಕೆ ಉದಾಹರಣೆ ಎಂಬಂತೆ ಯುವಕನೊಬ್ಬ ತನ್ನ ಕಾರನ್ನೇ ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾನೆ. ಯುವಕನ ವಿಭಿನ್ನ ಪ್ರಯೋಗ ವೈರಲ್ ಆಗಿದೆ.
ಅಜಂಗಢ ಮೂಲದ ಸಲ್ಮಾನ್ ಎಂಬ ಬಡಗಿ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ಪರಿವರ್ತಿಸಿದ್ದಾನೆ. 3 ಲಕ್ಷ ಖರ್ಚು ಮಾಡಿ ಸಲ್ಮಾನ್ ಈ ಹೆಲಿಕಾಪ್ಟರ್ ಮಾದರಿಯ ಕಾರನ್ನು ತಯಾರಿಸಿದ್ದಾನೆ.
ಈ ಬಗ್ಗೆ ಮಾತನಾಡಿರುವ ಸಲ್ಮಾನ್, 4 ತಿಂಗಳು ತೆಗೆದುಕೊಂಡು ಅಂದಾಜು 3 ಲಕ್ಷ ರೂ. ಖರ್ಚು ಮಾಡಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಮಾದರಿಯ ಹಾಗೆ ತಯಾರಿಸಿದ್ದೇನೆ. ಈಗ ಕಾರಿಗೆ ಬೇಡಿಕೆಗಳು ಬರುತ್ತಿದೆ ಎಂದಿದ್ದಾರೆ.
ರಸ್ತೆಗಳಲ್ಲಿ ಹೆಲಿಕಾಪ್ಟರ್ ಕಾರು ಹೋಗುವಾಗ ಅದನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಜೀವನದಲ್ಲಿ ಹೆಲಿಕಾಪ್ಟರ್ ನಲ್ಲಿ ಹೋಗದವರು ನನ್ನ ಕಾರಿನಲ್ಲಿ ಕುಳಿತು ಆ ಅನುಭವವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಸಲ್ಮಾನ್ ಹೇಳುತ್ತಾರೆ.
ಸರ್ಕಾರ ಮತ್ತು ಕಂಪನಿಗಳು ನಮಗೆ ಸಹಾಯ ಮಾಡಿದರೆ, ನಾವು ನೀರು ಮತ್ತು ಗಾಳಿಯಲ್ಲಿ ಚಲಿಸುವ ಹೆಲಿಕಾಪ್ಟರ್‌ಗಳನ್ನು ಸಹ ಮಾಡಬಹುದು. ಇದೇ ರೀತಿಯ ಆವಿಷ್ಕಾರಗಳಿಗಾಗಿ ನಾವು ಈ ಕಲ್ಪನೆಯನ್ನು ಮುಂದಕ್ಕೆ ಕೊಂಡೊಯ್ಯಬಹುದು, ”ಎಂದು ಅವರು ಹೇಳಿದರು.