Advertisement
ಕಾನ್ಪುರ ಮೆಟ್ರೋ ರೈಲಿಗಾಗಿ 597 ಕೋಟಿ ರೂ ಗಳನ್ನು ಮೀಸಲಿಟ್ಟದೆ. ಅದೇ ಸಂದರ್ಭದಲ್ಲಿ 50 ಕೋಟಿ ರೂ ಗಳನ್ನು ರಾಷ್ಟ್ರೀಯ ಸ್ಫೂರ್ತಿ ಧಾಮ ನಿರ್ಮಾಣಕ್ಕೆಂದು ಯೋಗಿ ಸರ್ಕಾರ ಘೋಷಿಸಿದೆ.
Related Articles
Advertisement
ಅಯೋಧ್ಯೆಯಲ್ಲಿ “ಮರ್ಯಾದ ಪುರುಷೋತ್ತಮ ಶ್ರೀ ರಾಮ, ಅಯೋಧ್ಯಾ” ಹೆಸರಿನಲ್ಲಿ ವಿಮಾನ ನಿಲ್ದಾಣದ ಕೆಲಸ ಕಾರ್ಯ ಪ್ರಗತಿಯಲ್ಲಿದ್ದು, ವಿಮಾನ ನಿಲ್ದಾಣಕ್ಕಾಗಿ 101 ಕೋಟಿ ರೂ. ಗಳನ್ನು ಬಟೇಟ್ ನಲ್ಲಿ ಮಂಡಿಸಲಾಗಿದೆ. ರಾಮ ಮಂದಿರದಿಂದ ಅಯೋಧ್ಯ ಧಾಮಕ್ಕೆ ತೆರಳುವ ರಸ್ತೆ ನಿರ್ಮಾಣಕ್ಕೆ 300 ಕೋಟಿ ರೂ. ಹಾಗೂ ಅಯೋದ್ಯೆಯಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗಾಗಿ 100 ಕೋಟಿಯನ್ನು ಘೋಷಿಸಲಾಗಿದೆ.
ಕಾನ್ಪುರ ಮೆಟ್ರೋ ಅಭಿವೃದ್ಧಿಗೆ 597 ಕೋಟಿ..!
ಕಾನ್ಪುರ ಮೆಟ್ರೋ ರೈಲು ಯೋಜನೆಗೆ ಅನುಮೋದಿತ ಮೊತ್ತ 11,076 ಕೋಟಿ ರೂ. 2021–22 ರ ಆರ್ಥಿಕ ವರ್ಷದ ಬಜೇಟ್ ನಲ್ಲಿ ಯೋಗಿ ಸರ್ಕಾರ 597 ಕೋಟಿ ರೂ ಗಳನ್ನು ಹೊರಡಿಸಿದೆ.
1326 ಕೋಟಿ ರೂ. ದೆಹಲಿ– ಮಿರತ್ RRTC ಅಭಿವೃದ್ಧಿಗೆ
ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕನ್ನ್ಹಾ 1326 ಕೋಟಿ ರೂ. ಗಳನ್ನು ದೆಹಲಿ– ಮೀರತ್ RRTC ಅಭಿವೃದ್ಧಿಗೆ ಹಾಗೂ 100 ಕೋಟಿ ರೂ. ಗಳನ್ನು ಗೋರಕ್ ಪುರ – ವಾರಣಾಸಿ ಮೆಟ್ರೋ ಯೋಜನೆಗೆ ಘೋಷಿಸಿದ್ದಾರೆ.
Jewar Airpor ಇನ್ನೂ ಹೆಚ್ಚು ಲ್ಯಾಂಡಿಂಗ್ ಸ್ಟ್ರಿಪ್ಸ್ ಗಳನ್ನು ಪಡೆಯಲಿದೆ.
Jewar Airport ನಲ್ಲಿ ಗಣನೀಯ ಪ್ರಮಾಣದಲ್ಲಿ ಲ್ಯಾಂಡಿಂಗ್ ಏರ್ ಸ್ಟ್ರಿಪ್ಸ್ ಗಳನ್ನು ನಿರ್ಮಿಸುವುದಕ್ಕಾಗಿ ಉತ್ತರ ಪ್ರದೇಶ ಸರ್ಕಾರ 2000 ಕೋಟಿ ರೂ. ಗಳನ್ನು ಘೋಷಿಸಿದೆ. ಖುಷಿ ನಗರ ವಿಮಾನ ನಿಲ್ದಾಣವನ್ನು ಈಗಾಗಲೇ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಿದೆ. ಇದೇ ಮಾದರಿಯಲ್ಲಿ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಲಕ್ನೋ, ವಾರಣಾಸಿ, ಖುಷಿನಗರ್ ಹಾಗೂ ಗೌತಮ ಬುದ್ಧ ನಗರದಲ್ಲಿ ಶೀಘ್ರದಲ್ಲಿ ಆಗಲಿದೆ ಎಂದು ಹೇಳಿದೆ.
ಓದಿ: ನಿಮ್ಮ ಪಾಕೆಟ್ ಖಾಲಿ ಮಾಡುವ ಮೂಲಕ ಮೋದಿ ಸರ್ಕಾರ ದೊಡ್ಡ ಕೆಲಸ ಮಾಡುತ್ತಿದೆ : ರಾಹುಲ್ ಗಾಂಧಿ
ನದಿಗಳ ಅಭಿವೃದ್ಧಿಗೆ ಹೆಚ್ಚುವರಿ ನಿಬಂಧನೆಗಳು
976 ಕೋಟಿ ರೂ. ಗಳನ್ನು ನದಿಗಳ ಅಭಿವೃದ್ಧಿಗಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಸರಯೂ ನದಿ ಯೋಜನೆಗೆ 610 ಕೋಟಿ, 271 ಕೋಟಿ ರೂ. ಪೂರ್ವ ಗಂಗಾ ನದಿ ಯೋಜನೆಗೆ ಹಾಗೂ ಕೆನ್ ಬೆಟ್ವಾ ಇಂಟರ್ ಲಿಂಕ್ ಕಾಲುವೆ ಯೋಜನೆಗೆ 104 ಕೋಟಿ ರೂ. ಗಳನ್ನು ಘೋಷಿಸಿದೆ.
ಇನ್ನು, ಪೂರ್ವಾಂಚಲ ಎಕ್ಸ್ ಪ್ರೆಸ್ ವೆಗೆ 1107 ಕೋಟಿ ರೂ. ಹಾಗೂ 1492 ಕೋಟಿ ರೂ ಗಳನ್ನು ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ ಗೆ ಈ ವರ್ಷದ ಬಜೇಟ್ ನಲ್ಲಿ ಅಭಿವೃದ್ಧಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಗೋರಖ್ ಪುರ ಎಕ್ಸ್ ಪ್ರೆಸ್ ವೇ ಯೋಜನೆಗೆ 860 ಕೋಟಿ ರೂ. 7200 ಕೋಟಿ ರೂ. ಗಳನ್ನು ಗಂಗಾ ಎಕ್ಸ್ ಪ್ರೆಸ್ ಯೋಜನೆಗೆ ಘೋಷಿಸಲಾಗಿದೆ.
ಓದಿ: ತಲಪಾಡಿಯಲ್ಲಿ ಕೋವಿಡ್ ಚೆಕ್ ಪೋಸ್ಟ್: ಗಡಿನಾಡ ಕನ್ನಡಿಗರಿಂದ ರಸ್ತೆ ತಡೆದು ಪ್ರತಿಭಟನೆ