Advertisement

ಉತ್ತರಪ್ರದೇಶದಲ್ಲಿ ಶಂಕಿತ ಉಗ್ರರ ಅಟ್ಟಹಾಸ; ಭಾರೀ ಕಾರ್ಯಾಚರಣೆ

06:11 PM Mar 07, 2017 | Sharanya Alva |

ಲಕ್ನೋ: ಉತ್ತರಪ್ರದೇಶದ ಲಕ್ನೋದ ಠಾಕೂರ್ ಗಂಜ್ ನಲ್ಲಿರುವ ಕಟ್ಟಡವೊಂದರಲ್ಲಿ ಶಂಕಿತ ಉಗ್ರನೊಬ್ಬ ಗುಂಡಿನ ದಾಳಿ ನಡೆಸಿದ್ದು, ಭಯೋತ್ಪಾದನ ನಿಗ್ರಹ ದಳ ಕಟ್ಟಡದ ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿದಿದೆ.

Advertisement

ಖಾಂಡ್ವಾ, ಮಧ್ಯಪ್ರದೇಶ ರೈಲು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕಿತ ಉಗ್ರ ಸೈಫುಲ್ ಕಟ್ಟಡದೊಳಗೆ ಅಡಗಿಕೊಂಡಿಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.ಏತನ್ಮಧ್ಯೆ ಕಾನ್ಪುರದಲ್ಲಿ ಓರ್ವ ಶಂಕಿತ ಉಗ್ರನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.

ಉಗ್ರ ಕಟ್ಟಡದ ಕೋಣೆಯೊಂದರಲ್ಲಿ ಅಡಗಿಕೊಂಡಿದ್ದು, ಆತನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಇದ್ದಿರುವುದಾಗಿ ವರದಿ ತಿಳಿಸಿದೆ. ನಾವು ಆತನನ್ನು ಸೆರೆಹಿಡಿಯುವ ವಿಶ್ವಾಸ ಇದ್ದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ದಾಲ್ಜಿತ್ ಚೌಧರಿ ಎಎನ್ ಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next